ಬಿಬಿಎಂಪಿಯ ಕೋವಿಡ್ ವಾರ್ ರೂಮ್ ಬಗ್ಗೆ ವಿಶ್ವ ಆರ್ಥಿಕ ವೇದಿಕೆ ಶ್ಲಾಘನೆ

ವಾರ್ ರೂಮ್ ಅನ್ನು ಸ್ಥಾಪಿಸುವ ಮೂಲಕ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಪ್ರಯತ್ನಗಳನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಮ್) ಗುರುತಿಸಿ ಶ್ಲಾಘಿಸಿದೆ.
ಬಿಬಿಎಂಪಿ ಕೋವಿಡ್ ವಾರ್ ರೂಮ್
ಬಿಬಿಎಂಪಿ ಕೋವಿಡ್ ವಾರ್ ರೂಮ್

ಬೆಂಗಳೂರು: ವಾರ್ ರೂಮ್ ಅನ್ನು ಸ್ಥಾಪಿಸುವ ಮೂಲಕ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಪ್ರಯತ್ನಗಳನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಮ್) ಗುರುತಿಸಿ ಶ್ಲಾಘಿಸಿದೆ.  ‘Technology and Data Governance in Cities- Indian Cities at the Forefront of the Fight Against Covid-19’ ಬಿಡುಗಡೆ ಮಾಡುವುದರೊಡನೆ ವೇದಿಕೆಯು ಈ ಮಾನ್ಯತೆಯನ್ನು ಘೋಷಿಸಿದೆ. 

ಬೆಂಗಳೂರು ಮಾತ್ರವಲ್ಲದೆ ಭಾರತದ ಮತ್ತೊಂದು ಮಹಾನಗರಿ ಸೂರತ್ ಮತ್ತು ಪಿಂಪ್ರಿ-ಚಿಂಚ್ವಾಡ್ ಸಹ ಈ ಗೌರವಕ್ಕೆ ಪಾತ್ರವಾಗಿದೆ.

ಬಿಬಿಎಂಪಿ ಮಾಜಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. "ಬೆಂಗಳೂರಿನಲ್ಲಿ ವ್ಯಾಪಕ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತಂತ್ರಜ್ಞಾನಗಳು ಸಹಕಾರಿಯಾಗಿದೆ" ಎಂದು ಅವರು ಹೇಳಿದ್ದಾರೆ. ಕಮಿಷನರ್ ಆಗಿ ನನ್ನ ಅಧಿಕಾರಾವಧಿಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಆ ಕೆಲಸವನ್ನು ಮಾಡಲು ನನಗೆ ಅವಕಾಶ ಸಿಕ್ಕಿದ್ದು ಇದೀಗ ಬಿಬಿಎಂಪಿಯ ಈ ಕೆಲಸವನ್ನು ಜಾಗತಿಕ ಮಟ್ಟದಲ್ಲಿ ಗುರ್ತಿಸಲಾಗಿದೆ ಎಂದು ಅವರು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

"ಇದೊಂದು ಮಹತ್ವದ ದಾಖಲಾತಿ. ವರದಿಯಲ್ಲಿ, ಅವರು ಬೆಂಗಳೂರಿನಲ್ಲಿ ಏನು ಮಾಡಿದ್ದಾರೆಂದು ದಾಖಲಿಸಲಾಗಿದೆ. ಏಕೆಂದರೆ ಇದು ವಾರ್ ರೂಮ್ ಅನ್ನು ರಚಿಸಿದ ಕೆಲವೇ ನಗರಗಳಲ್ಲಿ ಮೊದಲನೆಯದು. ಸಾಂಕ್ರಾಮಿಕ ರೋಗವನ್ನು ಎದುರಿಸಲು ನಗರವು ಹೇಗೆ ಹೋರಾಡಿತು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ತಂತ್ರಜ್ಞಾನವನ್ನು ಎಂಡ್ ಟು ಎಂಡ್ ಹೇಗೆ ಬಳಸಲಾಯಿತು ಎಂಬ ಪ್ರಯತ್ನವನ್ನು ಇಲ್ಲಿ ಶ್ಲಾಘಿಸಲಾಗಿದೆ"

ವಿಶೇಷವೆಂದರೆ ರಾಜ್ಯ ಸರ್ಕಾರ ಈ ವರದಿಯನ್ನಿನ್ನೂ ಗಮನಿಸಿಲ್ಲ.ಮೂರು ಜಾಗತಿಕ ನಗರಗಳಾದ ಟೆಲ್ ಅವೀವ್, ಲಿಸ್ಬನ್ ಮತ್ತು ನ್ಯೂಯಾರ್ಕ್ ನಗರಗಳನ್ನು ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸುವಿಕೆಯ ದೃಷ್ಟಿಯಿಂದ ಮೌಲ್ಯಮಾಪನ ಮಾಡಲಾಗಿದೆ, ಜೊತೆಗೆ ತಂತ್ರಜ್ಞಾನ ಮತ್ತು ದತ್ತಾಂಶ ಆಡಳಿತಕ್ಕೆ ಆಧಾರವಾಗಿರುವ ಕಾರ್ಯವಿಧಾನಗಳ ವರದಿಯಲ್ಲಿ  ಸ್ಥಳೀಯ ಅಧಿಕಾರಿಗಳು ತಮ್ಮ ಕೋವಿಡ್ 19 ವಾರ್ ರೂಮ್ ಗಳನ್ನು ವಿವಿಧ ರಾಜ್ಯ ಮತ್ತು ನಗರ ಸಂಸ್ಥೆಗಳ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸಿದ್ದಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ವಾರ್ ರೂಮ್ ಗಳ ಮೂಲಕ ನಗರಗಳು ನಾಗರಿಕ ಸಮಾಜ, ಸ್ಥಳೀಯ ವ್ಯವಹಾರಗಳು ಮತ್ತು ಇತರೆ ಅಂಶಗಳನ್ನು ಒಂದೇ ವೇದಿಕೆಯಲ್ಲಿ ತಮ್ಮ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನಗರ ಆಡಳಿತದೊಂದಿಗೆ ಒಂದಾಗಿಸಿದ್ದವು.

"ವೈರಸ್ ಹರಡುವುದನ್ನು ನಿಭಾಯಿಸಲು, ಲಾಕ್‌ಡೌನ್ ಅನ್ನು ನಿರ್ವಹಿಸಲು ಮತ್ತು ನಾಗರಿಕರೊಂದಿಗೆ ಪರಿಣಾಮಕಾರಿ ಸಂವಹನ ಮಾರ್ಗಗಳನ್ನು ನಿರ್ವಹಿಸಲು ಆರೋಗ್ಯ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ನಗರಗಳು ಅಸ್ತಿತ್ವದಲ್ಲಿರುವ ಸ್ಮಾರ್ಟ್ ಪರಿಹಾರಗಳನ್ನು ಬಳಸಿಕೊಂಡು ದೃಢ ವಾದ ಕಾರ್ಯವಿಧಾನವನ್ನು ತ್ವರಿತವಾಗಿ ಜಾರಿಗೆ ತಂದವು. ಸ್ಮಾರ್ಟ್ ಸಿಟೀಸ್ ಮಿಷನ್‌ನ ನೋಡಲ್ ಸಚಿವಾಲಯವಾದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ) ಸ್ಥಾಪಿಸಿದ ನಿರ್ದಿಷ್ಟ ಕ್ರಮಗಳಿಂದ ಭಾರತೀಯ ಸ್ಮಾರ್ಟ್ ಸಿಟಿಗಳಿಂದ ತಂತ್ರಜ್ಞಾನ ಪರಿಹಾರಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಅನುಕೂಲವಾಯಿತು” ವರದಿ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com