ಧರ್ಮಸ್ಥಳದ 'ಎತ್ತಿನ ಬಂಡಿ ಕಾರು' ಮತ್ತೊಮ್ಮೆ ಸುದ್ದಿಯಲ್ಲಿ: ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!

ಧರ್ಮಸ್ಥಳದ ಲಕ್ಷ ದೀಪೋತ್ಸವದ ವೇಳೆ ಭಾರೀ ಸುದ್ದಿ ಮಾಡಿದ್ದ ಎತ್ತಿನ ಬಂಡಿ ಕಾರು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. 
ಎತ್ತಿನ ಬಂಡಿ ಕಾರು
ಎತ್ತಿನ ಬಂಡಿ ಕಾರು

ಬೆಂಗಳೂರು: ಧರ್ಮಸ್ಥಳದ ಲಕ್ಷ ದೀಪೋತ್ಸವದ ವೇಳೆ ಭಾರೀ ಸುದ್ದಿ ಮಾಡಿದ್ದ ಎತ್ತಿನ ಬಂಡಿ ಕಾರು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. 

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರ ಅವರು ಈ ಎತ್ತಿನ ಬಂಡಿ ಕಾರಿನ ವಿಡಿಯೋ ಜೊತೆತೆ ಟ್ವೀಟ್ ಮಾಡಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಧರ್ಮಸ್ಥಳದಲ್ಲಿ ಕಾರಿನ ಹಿಂಭಾಗದ ರಚನೆಯೊಂದಿಗೆ ಮುಂದೆ ಎರಡು ಎತ್ತುಗಳನ್ನು ಕಟ್ಟಿರುವ ಬಂಡಿ ಇದೆ. ಎತ್ತಿನ ಬಂಡಿಗಿಂತ ಭಿನ್ನವಾಗಿರುವ ಇದರಲ್ಲಿ ರೈತನೊಬ್ಬ ಕುಳಿತು ಅದನ್ನು ಚಲಾಯಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ ಅವರು, ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್ ಮಸ್ಕ್'ಗೆ ಕೂಡ ಇದಕ್ಕಿಂದ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ವಿಡಿಯೋಗೆ ಸಾವಿರಾರು ಜನರು ಲೈಕ್ ನೀಡುತ್ತಿದ್ದು, 48,000ಕ್ಕೂ ಅಧಿಕ ರೀಟ್ವೀಟ್'ಗಳಿ ಬಂದಿವೆ. 

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಪರಿಕಲ್ಪನೆಯಲ್ಲಿ ಮೂಡಿದ ಬಂದ ಎತ್ತಿನ ಗಾಡಿ ಕಾರು ಇದಾಗಿದೆ. ಉಜಿರೆ ಎಸ್'ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಳೆಯ ಅಂಬಾಸಿಡರ್ ಕಾರಿನ ಹಿಂಭಾಗವನ್ನು ಬಳಸಿಕೊಂಡು 2 ಎತ್ತುಗಳ ಮೂಲಕ ಎಳೆಯಬಹುದಾದ ಎತ್ತಿನ ಗಾಡಿ ಕಾರನ್ನು ತಯಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com