ಹೊಸ ವರ್ಷಾಚರಣೆ ಹಿನ್ನಲೆ ಮೂರು‌ ದಿನ ಪ್ರವಾಸಿಗರಿಗೆ ನಂದಿಬೆಟ್ಟ ಪ್ರವೇಶ ಬಂದ್

ಮಾರಕ ಕೊರೋನಾ ಸಾಂಕ್ರಾಮಿಕ 2ನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮುಂದಿನ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ನಂದಿ ಬೆಟ್ಟ
ನಂದಿ ಬೆಟ್ಟ
Updated on

ಚಿಕ್ಕಬಳ್ಳಾಪುರ: ಮಾರಕ ಕೊರೋನಾ ಸಾಂಕ್ರಾಮಿಕ 2ನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮುಂದಿನ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಹೌದು.. ಎರಡನೇ ಹಂತದ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ನಂದಿ ಗಿರಿಧಾಮವನ್ನು ಮೂರು ದಿನಗಳ ಕಾಲ ಬಂದ್ ಮಾಡಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಡಿ 30ರಿಂದ ಬೆಳಗ್ಗೆ ಆರು ಗಂಟೆಯಿಂದ ಜನವರಿ 2 ರ ಬೆಳಿಗ್ಗೆ ಆರು ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಯನ್ನು  ನಿಷೇಧಿಸಲಾಗಿದೆ.

ನೂತನ ವರ್ಷಾಚರಣೆಗೆ ತಡೆ ಹಾಗೂ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ದಟ್ಟಣೆ, ಮೋಜು ಮಸ್ತಿ ಮಾಡುವುದರಿಂದ  ಕೊರೊನಾ ಹರಡುವ ಆತಂಕವಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ಪ್ರತಿ ವರ್ಷ ಡಿ 31ರ. ಸಂಜೆ 5 ಗಂಟೆಯ ಬಳಿಕ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಿ ಜ. 1ರ ಬೆಳಗ್ಗೆ 8 ಗಂಟೆಯ ನಂತರ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಲ ನಂದಿಬೆಟ್ಟ ಬಂದ್ ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com