ಹನುಮ ಹುಟ್ಟಿದ ಡೇಟ್ ನಿನಗೆ ಗೊತ್ತಾ?: ಮೈಸೂರಿನ ಸ್ನೇಹಿತನಿಗೆ ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳಿಗೂ ಅಷ್ಟಕ್ಕೆ ಅಷ್ಟೇ ಎಂಬುದು ತಿಳಿದಿರುವಂಥಹದ್ದೇ... ಈ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಮೀನು ತಿಂದಿದ್ದು ವಿವಾದವಾಗಿತ್ತು. 
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಮೈಸೂರು: ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳಿಗೂ ಅಷ್ಟಕ್ಕೆ ಅಷ್ಟೇ ಎಂಬುದು ತಿಳಿದಿರುವಂಥಹದ್ದೇ... ಈ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಮೀನು ತಿಂದಿದ್ದು ವಿವಾದವಾಗಿತ್ತು. 

ಈಗ ಮೈಸೂರಿನ ಸಿದ್ದರಾಮನ ಹುಂಡಿಗೆ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ಹನುಮ ಜಯಂತಿಯ ಬಗ್ಗೆ ತಮ್ಮ ಮನದ ಮಾತನ್ನು ಹೇಳಿದ್ದಾರೆ.

ಸ್ನೇಹಿತರ ಜೊತೆ ನಾನ್ ವೆಜ್ ಊಟಕ್ಕೆ ಕುಳಿತಾಗ ಸಿದ್ದರಾಮಯ್ಯಗೆ ಅಭಿಮಾನಿಗಳು ಅಣ್ಣಾ, ಇವತ್ತು ಹನುಮ ಜಯಂತಿ.... ಎಂದರು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಾವ ಜಯಂತಿ? ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಸ್ಪಷ್ಟವಾಗಿ ಗೊತ್ತಿದ್ರೆ ಜಯಂತಿ ಆಚರಣೆ ಮಾಡು ಇಲ್ಲದಿದ್ರೆ ಚಿಕನ್ ತಿನ್ನಬಹುದು, ಗೊತ್ತಿಲ್ಲ ತಾನೆ ಏನೂ ಆಗಲ್ಲ ತಿನ್ನು 
ಎಂದು ಹೇಳಿದ್ದಾರೆ.

ಈ ಮೊದಲು ನಾನು ದಿನಕ್ಕೆ 2 ಬಾರಿ ನಾನ್ ವೆಜ್ ಊಟ ಮಾಡುತ್ತಿದ್ದೆ. ಆಂಜಿಯೋಗ್ರಾಮ್ ಆದ ಬಳಿಕ ಈಗ ವಾರಕ್ಕೆ 3 ದಿನವಷ್ಟೇ ನಾನ್ ವೆಜ್ ಊಟ ಮಾಡುತ್ತಿದ್ದೇನೆ ಎಂದು ತಮ್ಮ ಆಹಾರದ ಕ್ರಮದ ಬಗ್ಗೆ ಮಾತನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com