ಗ್ರಾಪಂ ಚುನಾವಣೆ: ಮಂಗಳಮುಖಿಗೆ ಗೆಲುವಿನ ಹಾರ

ತೀವ್ರ ಕುತೂಹಲ ಮೂಡಿಸಿದ್ದ ಗ್ರಾಮ ಪಂಚಾಯಿತಿಯ ಚುನಾವಣಾ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಮತದಾರರು ಮಂಗಳಮುಖಿಗೂ ಆಯ್ಕೆ ಮಾಡುವ ಮೂಲಕ ವಿಜಯದ ಮಾಲೆ ತೊಡಿಸಿದ್ದಾರೆ.
ಮಂಗಳಮುಖಿ ಸುಧಾ
ಮಂಗಳಮುಖಿ ಸುಧಾ
Updated on

ಹೊಸಪೇಟೆ: ತೀವ್ರ ಕುತೂಹಲ ಮೂಡಿಸಿದ್ದ ಗ್ರಾಮ ಪಂಚಾಯಿತಿಯ ಚುನಾವಣಾ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಮತದಾರರು ಮಂಗಳಮುಖಿಗೂ ಆಯ್ಕೆ ಮಾಡುವ ಮೂಲಕ ವಿಜಯದ ಮಾಲೆ ತೊಡಿಸಿದ್ದಾರೆ.

ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ರಾಜಾಪುರದ ಕ್ಷೇತ್ರದಿಂದ ಮಂಗಳಮುಖಿ ಸುಧಾ ಗೆಲುವು ಸಾಧಿಸಿದ್ದಾರೆ. ಕಲ್ಲಹಳ್ಳಿ ಗ್ರಾಪಂ ಸ್ಥಾಪನೆಯಾಗಿ 26 ವರ್ಷ ಆಗಿದ್ದು, ಆಗಿನಿಂದಲೂ ಈ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆದರೀಗ ಇದೇ ಮೊದಲ ಬಾರಿಗೆ ಚುನಾವಣೆ  ನಡೆದಿದ್ದು, ಮಂಗಳಮುಖಿಗೆ ಆಯ್ಕೆ ಮಾಡುವ ಮೂಲಕ ಮತದಾರ ಬಾಂಧವರು ಆಶೀರ್ವಾದ ಮಾಡಿದ್ದಾರೆ‌.

ಒಟ್ಟು 622 ಮತ ಗಳಿಸಿರುವ ಸುಧಾ ಅವರು ಈ ಗ್ರಾಪಂ ನಲ್ಲಿ ಇದೆ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ವಿಶೇಷವಾಗಿದೆ. ಈ ವರೆಗೆ ಈ ಕಲ್ಲಹಳ್ಳಿ ಗ್ರಾಪಂನಲ್ಲಿ ಅವಿರೋಧ ಆಯ್ಕೆ ನಡೆಯುತ್ತಿತ್ತು. ಚುನಾವಣೆ ನಡೆದಿದ್ದರಿಂದ ಇಂತಹವರ ಆಯ್ಕೆಗೆ ಸಾಧ್ಯವಾಗಿದೆ.ರಾಜಾಪುರದ 3  ಮತಕ್ಷೇತ್ರಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com