ಕುನಾಲ್ ಕಾಮ್ರಾ ವಿಮಾನ ಹಾರಾಟ ನಿಷೇಧ: ಬೆಂಗಳೂರು ಕಾಮಿಡಿಯನ್ ಗಳಿಂದ ಮಿಶ್ರ ಪ್ರತಿಕ್ರಿಯೆ

ಹಾಸ್ಯ ಅತ್ಯುತ್ತಮ ಔಷಧವೆನ್ನುವುದು ಸತ್ಯ. ಆದರೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಪಾಲಿಗೆ ಇದು ಕೆಲ ಕಹಿ ಅನುಭವಕ್ಕೆ ಕಾರಣವಾಗಿದೆ. ಕಮ್ರಾ ಅವರು ವಿಮಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ನಿಂದಿಸಿದ ಬಗೆಗೆ ಬೆಂಗಳೂರಿನ ಹಾಸ್ಯ ಕಲಾವಿದಸಹ ಪ್ರತಿಕ್ರಯಿಸಿದ್ದಾರೆ.  "ಕಾಮ್ರಾ ಅವರ ಅಭಿಪ್ರಾಯಗಳನ್ನು ತಿಳಿಸಲು ಅವರಿಗೆ ಇತರೆ ವೇದಿಕೆಗಳಿವೆ, ವಿಮಾನದಲ್
ಕುನಾಲ್ ಕಾಮ್ರಾ
ಕುನಾಲ್ ಕಾಮ್ರಾ

ಬೆಂಗಳೂರು: ಹಾಸ್ಯ ಅತ್ಯುತ್ತಮ ಔಷಧವೆನ್ನುವುದು ಸತ್ಯ. ಆದರೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಪಾಲಿಗೆ ಇದು ಕೆಲ ಕಹಿ ಅನುಭವಕ್ಕೆ ಕಾರಣವಾಗಿದೆ. ಕಮ್ರಾ ಅವರು ವಿಮಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ನಿಂದಿಸಿದ ಬಗೆಗೆ ಬೆಂಗಳೂರಿನ ಹಾಸ್ಯ ಕಲಾವಿದಸಹ ಪ್ರತಿಕ್ರಯಿಸಿದ್ದಾರೆ.  "ಕಾಮ್ರಾ ಅವರ ಅಭಿಪ್ರಾಯಗಳನ್ನು ತಿಳಿಸಲು ಅವರಿಗೆ ಇತರೆ ವೇದಿಕೆಗಳಿವೆ, ವಿಮಾನದಲ್ಲಿ ಇದು ನಡೆಯಬೇಕಿತ್ತೆ?  ಇತರ ಪ್ರಯಾಣಿಕರಿಗೆ ತೊಂದರೆಯಾಗಬೇಕೆ?" ಎಂದು  ಐಟಿ ವೃತ್ತಿಪರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಸುಬ್ರಹ್ಮಣ್ಯ ಹೆಗ್ಡೆ ಅಭಿಪ್ರಾಯಪಟ್ಟರು.

"ಖಂಡಿತವಾಗಿಯೂ ಕಮ್ರಾಅವರಿಗೆ  ತನ್ನ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸುವ ಹಕ್ಕಿದೆ ಆದರೆ ಇನ್ನೊಬ್ಬರ ವೈಯಕ್ತಿಕ ನಿಂದನೆ ಸಲ್ಲ" ಅವರು ಹೇಳಿದ್ದಾರೆ.

 "ಕೆಲವೊಮ್ಮೆ ನೀವು ನೈತಿಕತೆಯ ನೆಲೆಗಟ್ಟಿನಲ್ಲಿ ನೋಡಬೇಕಿದೆ. ಯಾರಿಗಾದರೂ ತಮ್ಮದೇ ಆದ ಔಷಧಿಗಳನ್ನು ಒದಗಿಸುವುದು ಯಾವಾಗಲೂಉತ್ತಮವಲ್ಲ " ಹಾಸ್ಯನಟಿ ಮತ್ತು ಆರ್ಜೆ ಆಗಿರುವ ಸೋನು ವೇಣುಗೋಪಾಲ್ ಹೇಲಿದ್ದು ಅವರು ಗೋಸ್ವಾಮಿಯವರ ವರ್ತನೆ ಬಗೆಗೆ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

. "ಗೋಸ್ವಾಮಿ ಅವರ ಚಾನೆಲ್‌ನಲ್ಲಿ ಇದು ಸಾಮಾನ್ಯವೆನ್ನುವುದು ಎಲ್ಲರಿಗೆ ತಿಳಿದ ವಿಚಾರ ಅಲ್ಲಿ ಇತರ ವ್ಯಕ್ತಿಗೆ ಒಂದು ಪದವನ್ನು ಸಹ ಆಡಲು ಸಾಧ್ಯವಿಲ್ಲ. ಅವರ ಶೋದಲ್ಲಿ ಹಾಗೆ ಮಾಡಲು ಸಾಧ್ಯವೆಂದಾದರೆ ಕಾಮ್ರಾ ಮಾಡಿದ ತಪ್ಪೇನು?" ಎಂದು ಹರ್ಷಿತ್ ವಿವರಿಸುತ್ತಾರೆ. "ಅಲ್ಲದೆ, ಅವರು ಸಿಬ್ಬಂದಿ ಮತ್ತು ಪೈಲಟ್‌ಗಳಿಗೂ ಕ್ಷಮೆಯಾಚಿಸಿದರು."ಎಂದು ವಿವರಿಸಿದರು.

ಹೀಗೆ ಬೇರೆ ಬೇರೆ ಹಾಸ್ಯನಟರು ಘಟನೆಯ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಕಮ್ರಾ ಅವರ ಕ್ರಿಯೆಯ ಪರಿಣಾಮಗಳ ಬಗ್ಗೆ  ಎಲ್ಲರಲ್ಲಿ ಒಮ್ಮತವಿದೆ. "ಹಾಸ್ಯನಟರು ತಮ್ಮ ಶೋಗಳ ಕಾರಣ ನಿರಂತರವಾಗಿ ಸಂಚಾರದಲ್ಲಿರುತ್ತಾರೆ.ಹೀಗೆ ವಿಮಾನಯಾನ ನಿಷೇಧದಿಂದ ಅವರಿಗೆ ಸಂಕಷ್ಟ ಎದುರಾಗುತ್ತದೆ." ಎಂದು ಹರ್ಷಿತ್ ವಾದಿಸುತ್ತಾರೆ. ಈ ಕ್ರಮವು ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡ ವೇಣುಗೋಪಾಲ್, ಇಂಡಿಗೊ ವಿಮಾನಯಾನ ಸಂಸ್ಥೆಯೊಡನೆ ಮಾತ್ರವೇ ಈ ಘಟನೆ ನಡೆಇದ್ರುವಾಗ ಇತರ ವಿಮಾನಯಾನ ಸಂಸ್ಥೆಗಳು ಏಕೆ ಅವರನ್ನು ನಿಷೇಧಿಸಿದೆ?"ಭಾರತದಲ್ಲಿನ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳು ಈಗಾಗಲೇ ಸಾಕಷ್ಟು ಸಮಸ್ಯೆಯಿಂದ ಕೂಡಿವೆ. ಈ ಒಂದು ವಿಷಯವು ಹೆಚ್ಚು ಗೊಂದಲಕ್ಕೆ ಹೇಗೆ  ಈಡಾಗುತ್ತದೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಘಟನೆ ಹಿನ್ನೆಲೆ

ಇತ್ತೀಚೆಗೆ ಇಂಡಿಗೊ ವಿಮಾನಯಾನ ಸಂಸ್ಥೆಕುನಾಲ್ ಕಾಮ್ರಾ ಅವರ ಮೇಲೆ ಆರು ತಿಂಗಳ ತಾತ್ಕಾಲಿಕ ನಿಷೇಧವನ್ನು ವಿಧಿಸಿದೆ. ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ  ಜತೆಗಿನ ಹಾರಾಟದ ವೇಳೆ ಕಮ್ರಾ ಅವರನ್ನು ನಿಂದಿಸಿ ಅವಮಾನಿಸಿದ್ದಾರೆ ಎಂದು ಜತೆಗೆ ಅವ್ರ ಈ ಸಂಬಾಷಣೆಯನ್ನು ಏಕಪಕ್ಷೀಯ ಸಂವಾದದ ವೀಡಿಯೊವನ್ನು ಮಾಡಲಾಗಿದೆ ಅದನ್ನು ಅವರು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಸಹ ಹಂಚಿಕೊಂಡಿದ್ದ ಕಾರಣ ಸಾಕಷ್ಟು ವೈರಲ್ ಆಗಿದೆ.

ವೀಡಿಯೋದಲ್ಲಿ ಕಾಮ್ರಾಅವರ ಕಾಮೆಂಟ್‌ಗಳು ಮತ್ತು ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲು ಗೋಸ್ವಾಮಿ ಲ್ಯಾಪ್‌ಟಾಪ್‌ನಲ್ಲಿ ಹುದುಗಿಕೊಂಡಿರುವುದನ್ನು ಕಾಣಬಹುದು. ಇದಾದ ಬೆನ್ನಲ್ಲೇ  , ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇಂಡಿಗೋನಂತೆ ಇತರೆ ವಿಮಾನಯಾನ ಸಾಂಸ್ಥೆಗಳೂ ಕಮ್ರಾ ಅವರನ್ನು ನಿಷೇಧಿಸಿ ಎಂದು ಸೂಚಿಸುತ್ತಾರೆ. ಇದೀಗ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಗೋಏರ್  ಸಹ ಕಾಮ್ರಾಅವರ ಹಾರಾಟವನ್ನು ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com