ಪ್ರೋತ್ಸಾಹ ಧನ ಕೊಡುವುದರಿಂದ ಕನ್ನಡದ ಮೇಲೆ ಪ್ರೀತಿ ಬರಲು ಸಾಧ್ಯವಿಲ್ಲ: ಸುಧಾಮೂರ್ತಿ

ಲೇಖಕಿ, ಎಂಜಿನೀಯರ್ ಇನ್ ಫೋಸಿಸ್ ಫೌಂಡೇಶನ್ ಅಧ್ಯಕ್ಷೆ  ಸೇರಿದಂತೆ ಹಲವು ಹೆಸರುಗಳಲ್ಲಿ ಸುಧಾ ಮೂರ್ತಿ ಮೆಚ್ಚುಗೆ ಪಡೆದಿದ್ದಾರೆ.  ಆದರೆ ಅವರ ಕನ್ನಡದ ಮೇಲಿನ ಪ್ರೀತಿ ಮಾತ್ರ ಹೇಳತೀರದು.
ಸುಧಾ ಮೂರ್ತಿ
ಸುಧಾ ಮೂರ್ತಿ
Updated on

ಬೆಂಗಳೂರು:  ಲೇಖಕಿ, ಎಂಜಿನೀಯರ್ ಇನ್ ಫೋಸಿಸ್ ಫೌಂಡೇಶನ್ ಅಧ್ಯಕ್ಷೆ  ಸೇರಿದಂತೆ ಹಲವು ಹೆಸರುಗಳಲ್ಲಿ ಸುಧಾ ಮೂರ್ತಿ ಮೆಚ್ಚುಗೆ ಪಡೆದಿದ್ದಾರೆ.  ಆದರೆ ಅವರ ಕನ್ನಡದ ಮೇಲಿನ ಪ್ರೀತಿ ಮಾತ್ರ ಹೇಳತೀರದು.

ಭಾಷೆಯ ಬಗ್ಗೆ ಹೆಮ್ಮೆಯನ್ನು ಬೆಳೆಸಿಕೊಳ್ಳುವಂತೆ ಸುಧಾ ಮೂರ್ತಿ ಒತ್ತಿಹೇಳಿದ್ದಾರೆ.  ಅವರ ಪ್ರಕಾರ,  ಭಾಷೆಯ ಬಗ್ಗೆ ಹೆಮ್ಮೆ ಬೆಳೆಸಿಕೊಂಡು ಆ ಮೂಲಕ ಜನಪ್ರಿಯಗೊಳಿಸುವ ಏಕೈಕ ಸಾಧನವಾಗಿದೆ ಎಂದುು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ.


ಪ್ರ: ಬೆಂಗಳೂರಿನಲ್ಲಿ ಕನ್ನಡ ತನ್ನ ಸ್ಥಾನ ಕಳೆದು ಕೊಳ್ಳುತ್ತಿದೆಯೇ?
ಯಾರೋ ಇಬ್ಬರು ಇಂಗ್ಲೀಷ್ ಮಾತನಾಡಬಹುದು, ಆದರೆ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಕನ್ನಡಿಗರು. ಆದರೆ ನಾವು ನಮ್ಮವರನ್ನು ಭೇಟಿಯಾದಗಲೂ ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ, ಆದರೆ ಬೇರೆ ರಾಜ್ಯಗಳ ಜನತೆ ನಮ್ಮಂತಿಲ್ಲ.

ಪ್ರ: ಕೇವಲ ಒಬ್ಬರು ಹೇಗೆ ಕನ್ನಡವನ್ನು ಪ್ರಚಾರ ಮಾಡಬಹುದು?
ನಮ್ಮ ಭಾಷೆಯ ಬಗ್ಗೆ ಪ್ರೀತಿ ಹಾಗ ಹೆಮ್ಮೆ ಇದ್ದರೆ ಕನ್ನಡವನ್ನು ಅಭಿವೃದ್ಧಿಗೊಳಿಸಿ ಜನಪ್ರಿಯವಾಗಿಸಬಹುದು, ಭಾಷೆಯನ್ನು ಪ್ರೀತಿಸಿದಾಗ ಅದರ ಸುಗಂಧ ನಿಮಗೆ ತಿಳಿಯುತ್ತದೆ.  ಆದರೆ ಭಾಷೆಯ ಮೇಲಿನ ಪ್ರೀತಿ ಪ್ರೋತ್ಸಾಹ ಧನ ನೀಡುವುದರಿಂದ ಬರುವುದಿಲ್ಲ,  ಅದು ಹೃದಯದಿಂದ ಬರಬೇಕು.

ಪ್ರ: ಮಕ್ಕಳಿಗೆ  ಕನ್ನಡ ಹೇಗೆ ಕಲಿಸಬಹುದು?
ಪೋಷಕರ ಮೇಲೆ ಮಹತ್ತರವಾದ ಜವಾಬ್ದಾರಿಯಿದೆ, ಅವರ ಮಾತೃಭಾಷೆ ಕನ್ನಡವಾಗಿದ್ದರೇ  ಮಕ್ಕಳ ಜೊತೆ ಕನ್ನಡದಲ್ಲೇ ಮಾತನಾಡಬೇಕು.

ಪ್ರ: ಬುಧವಾರದಿಂದ ಆರಂಭವಾಗುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗುತ್ತೀರಾ?
ಇಲ್ಲ, ಮುಂದಿನ 10 ದಿನಗಳ ಕಾಲ ನಾನು ಪ್ರವಾಸದಲ್ಲಿರುತ್ತೇನೆ, ನಾನು ಬರೆದದ್ದು ನನ್ನ ಖುಷಿಗಾಗ, ನಾನು ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ,  ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ವಿವಿಧ ಕ್ಷೇತ್ರಗಳಿಂದ ಬಂದ ಜನತೆ ಬರೆಯುತ್ತಿದ್ದಾರೆ. ಇದರ ಬಗ್ಗೆ ನನಗೆ ಸಂತೋಷವಿದೆ,  ಸಾಹಿತ್ಯವು ಕೇವಲ ತಮ್ಮ ಶಿಕ್ಷಣದ ಒಂದು ಭಾಗವಾಗಿ ಅಧ್ಯಯನ ಮಾಡುವ ಜನರಿಗೆ ಸೀಮಿತವಾಗಿಲ್ಲ.

ಪ್ರ: ಗೋಪಿ ಡೈರಿಯ ಬಗ್ಗೆ ವಿವರಣೆ ನೀಡಿ
ಗೋಪಿ ಒಂದು ವರ್ಷದವನು,  ಅವನು ಅಪಾರ ಸಂತೋಷ, ಬೇಷರತ್ತಾದ ಪ್ರೀತಿಯನ್ನು ನೀಡುತ್ತಾನೆ. ನಾನು ಗೋಪಿ ಒಂದು ಸಾಮಾನ್ಯ ನಾಯಿ ಎಂಗುಕೊಳ್ಳುತ್ತೇನೆ,  ಆದರೆ ಅದು ನನ್ನನ್ನ ತನನ್ನ ಅಜ್ಜಿ ಎಂದುಕೊಳ್ಳುತ್ತಾನೆ, ತಾಯಿ ಅಥವಾ  ಸ್ನೇಹಿತ ಎಂದು ಕೊಂಡು ಕಥೆ ಬರೆದಿದ್ದೇನೆ.

ಪ್ರ: ನಿಮ್ಮ ಮಂದಿನ ಪುಸ್ತಕ ಯಾವುದು?

 ಗೊಪಿ ಡೈರಿ ಮೂರು ಸರಣಿಯಲ್ಲಿದೆ.  ಈ ರ್ಷದ ಅಂತ್ಯದಲ್ಲಿ ಎರಡನೇ ಸರಣಿ ಹಾಗೂ 2021 ರಲ್ಲಿ ಮೂರು ನೇ ಆವೃತ್ತಿ ಬರಲಿದ.  ಇತ್ತೀಚೆಗಷ್ಚೆ ನನ್ನ ಮಗ ರೋಹನ್ ವಿವಾಹವಾಗಿದೆ. ಗೋಪಿ ನನ್ನ ಕಥೆಗೆ ಗೋಪಿಯೇ ಹೀರೋ. ಗೋಪಿಗೆ ಮುಂದಿನ ಆವೃತ್ತಿಯಲ್ಲಿ ಪೋಷರರು ಮತ್ತು  ಗರ್ಲ್ ಫ್ರೆಂಡ್ ಬರಲಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com