ಮೈಸೂರು: ಹುಣಸೂರು ತಾಲೂಕಿನಲ್ಲಿ ರಾಮಪಟ್ಟಣ ಗ್ರಾಮದ ಮೂಕನಹಳ್ಳಿ ರವಿಪ್ರಸನ್ನರಿಗೆ ಸೇರಿದ ಜೋಳದ ಹೊಲದಲ್ಲಿ ರೈತರು ಕೆಲಸ ಮಾಡುತ್ತಿರುವಾಗ ಚಿರತೆ ಮರಿಯೊಂದು ಪ್ರತ್ಯಕ್ಷವಾಗಿತ್ತು.
ಚಿರತೆ ಮರಿಯನ್ನು ಕಂಡು ಭಯಭೀತರಾದ ರೈತರು ಗ್ರಾಮಸ್ಥರ ಸಹಾಯದಿಂದ ಚಿರತೆ ಮರಿಯನ್ನು ಹಗ್ಗದಿಂದ ಕಟ್ಟಿಹಾಕಿ ನಂತರ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಆರ್. ಎಫ್. ಓ ಸಂದಿಪ್, ಡಿ. ಆರ್. ಎಫ್. ಓ ರಿಜ್ವಾನ್ ಅಹಮ್ಮದ್, ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮೂರು ತಿಂಗಳ ಚಿರತೆ ಮರಿಯನ್ನು ವಶಕ್ಕೆ ಪಡೆದು ಸೂಕ್ತ ಚಿಕಿತ್ಸೆ ನೀಡಿದರು.
ಗ್ರಾಮಸ್ಥರು ಇನ್ನೂ ಚಿರತೆಗಳು ಈ ಭಾಗದಲ್ಲಿ ಇರುವುದಾಗಿ ತಿಳಿಸಿದ್ದರಿಂದ ಮುನ್ನೆಚ್ಚರಿಕೆಯಾಗಿ ಅರಣ್ಯಾಧಿಕಾರಿಗಳು ಜಮೀನಿನಲ್ಲಿ ಬೋನು ಇರಿಸಿದ್ದಾರೆ.
Advertisement