ಚಾಮರಾಜನಗರ: ವ್ಯಕ್ತಿಯ ಬರ್ಬರ ಕೊಲೆ, ಕುರಿಗಾಗಿಯೇ ನಡೆಯಿತಾ ಕೊಲೆ?

ಕುರಿಗಾಹಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಾಮರಾಜನಗರ: ಕುರಿಗಾಹಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹಾದೇವಗೌಡ(53) ಮೃತ ದುರ್ದೈವಿ. ದುಷ್ಕರ್ಮಿಗಳು ಕುತ್ತಿಗೆ ಬಿಗಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮೃತರು ತೋಟದ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದು, 100 ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದರು ಎಂದು ತಿಳಿದುಬಂದಿದೆ.

ಇನ್ನು, ನಿನ್ನೆ ಸಂಜೆ ಕುರಿಗಳು ಮನೆಗೆ ವಾಪಸ್​ ಆದರೂ ಮಹಾದೇವಗೌಡ ಮಾತ್ರ ಬಂದಿರಲಿಲ್ಲ. ಆದ್ದರಿಂದ ಇಂದು ಬೆಳಗ್ಗೆ ಹುಡುಕಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು, ಕುರಿಗಾಹಿ ಬಳಿಯಿದ್ದ 10 ಸಾವಿರಕ್ಕೂ ಹೆಚ್ಚು ನಗದು, 6-7 ಕುರಿ ಹಾಗೂ ಧರಿಸಿದ್ದ ಉಂಗುರ ಇಲ್ಲ ಎಂದು ಮೃತನ ಪತ್ನಿ ತಿಳಿಸಿದ್ದಾರೆ. ಹೀಗಾಗಿ ದುಷ್ಕರ್ಮಿಗಳು ಕೊಲೆ ಮಾಡಿ, ಕುರಿ, ಹಣ ಕದ್ದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಸಂತೇಮರಹಳ್ಳಿ ಹಾಗೂ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿದ್ದು, ಕುರಿಗಾಹಿಯನ್ನು ಬರ್ಬರವಾಗಿ ಕೊಂದಿರುವ ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com