ದುರುಳರ ಬಳಿ ಭಿಕ್ಷೆ ಬೇಡಲ್ಲ: ಡಿಕೆ ಶಿವಕುಮಾರ್ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಟೀಕಾಪ್ರಹಾರ!

ಮೋಸ ವಂಚನೆಯಿಂದ ಅಧಿಕಾರ ನಡೆಸಿದವರ ಬಳಿ ನಾವು ಅನ್ನ ಕೇಳುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆರ್‌ ಎಸ್‌ ಎಸ್ ನಾಯಕ ಪ್ರಭಾಕರ್ ಭಟ್ ಟಾಂಗ್ ನೀಡಿದ್ದಾರೆ.
ಡಿಕೆ ಶಿವಕುಮಾರ್-ಪ್ರಭಾಕರ್ ಭಟ್
ಡಿಕೆ ಶಿವಕುಮಾರ್-ಪ್ರಭಾಕರ್ ಭಟ್

ರಾಮನಗರ: ಮೋಸ ವಂಚನೆಯಿಂದ ಅಧಿಕಾರ ನಡೆಸಿದವರ ಬಳಿ ನಾವು ಅನ್ನ ಕೇಳುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆರ್‌ ಎಸ್‌ ಎಸ್ ನಾಯಕ ಪ್ರಭಾಕರ್ ಭಟ್ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿಂದು ಏರ್ಪಡಿಸಿದ್ದ ಆರ್‌ ಎಸ್‌ಎಸ್ ಪಥಸಂಚಲನದ ಬಳಿಕ ಮಾತನಾಡಿದ ಅವರು, ಇವತ್ತು ನಮಗೆ ತುಂಬಾ ಸಂತೋಷದ ದಿನ. ನಾವೀಗ ಕಾಶ್ಮೀರಕ್ಕೆ ಹೋಗಿ, ಬರಬಹುದು, ಸಾವಿರ ವರ್ಷಗಳ ಹಿಂದೆ ನಮ್ಮ ದೇಶದ ಮೇಲೆ ಮುಸ್ಲಿಮರು, ಕ್ರಿಶ್ಚಿಯನ್ನರು ದಾಳಿ ಮಾಡಿದ್ದರು, ಬ್ರಿಟೀಷರು ನಮ್ಮನ್ನು ಗುಲಾಮರಾಗಿ ಮಾಡಿದ್ದರು. ಹಿಂದೂಗಳಿಗಾಗಿ ಹೋರಾಟ ಮಾಡಿದ ಭೂಮಿ ಇದು, ಸ್ವಾಮಿ ವಿವೇಕಾನಂದರ ಭಾಷಣವನ್ನು 125 ವರ್ಷಗಳ ನಂತರವೂ ಈಗಲೂ ಜಗತ್ತಿನಲ್ಲಿ ಹೇಳಲಾಗುತ್ತದೆ ಎಂದರು.

ಜಗತ್ತಿನಲ್ಲಿ ಕ್ರಿಶ್ಚಿಯನ್ ಮತವನ್ನು ಶ್ರೇಷ್ಠ ಎಂದು ತೋರಿಸಲು ವಿಶ್ವ ಸರ್ವ ಧರ್ಮ ಸಮ್ಮೇಳನ ಮಾಡಲಾಗಿತ್ತು. 1940 ರಲ್ಲಿ ಮುಸ್ಲಿಮರನ್ನು ಸಂಘಟಿಸಲು ಮುಸ್ಲಿಂ ಲೀಗ್ ಕಟ್ಟಲಾಯಿತು. ಕಾಂಗ್ರೆಸ್ ಹಿಂದೂಗಳ ಪರವಾಗಿ ನಿಲ್ಲಲಿಲ್ಲ, ದೇಶ ವಿಭಜನೆ ಆಗುವ ಬಗ್ಗೆ ಆತಂಕವಿತ್ತು. ಮುಸ್ಲಿಮರು ಲಕ್ಷ ಲಕ್ಷ ಹಿಂದೂಗಳನ್ನು ಕೊಂದರು. ದೇವಸ್ಥಾನಗಳನ್ನು ಧ್ವಂಸ ಮಾಡಿದರು. ಹಿಂದೂ ಸಮಾಜವನ್ನು ನಾಶ ಮಾಡಲು ಹೊರಟರು. ಸ್ವಾತಂತ್ರ್ಯ ಸಿಕ್ಕಿದ 72 ವರ್ಷಗಳಲ್ಲಿ ದೊಂಬಿ, ಗಲಭೆ, ಗಲಾಟೆ ಕಡಿಮೆಯಾಯಿತು. ಪಾಕಿಸ್ತಾನ ಪಾಪಿಗಳ ದೇಶ. ಜನರಿಗೆ ನ್ಯಾಯ ಕೊಡಿಸುವ ಸಲುವಾಗಿ ಇವತ್ತು ಪೌರತ್ವ ಕಾಯ್ದೆ ಬಂದಿದೆ.
 
ಜನರಿಗೆ ಊಟ, ವಸತಿ ಕೊಟ್ಟು ನೆಮ್ಮದಿಯ ಜೀವನ ಕೊಡುವುದು ತಪ್ಪಾ?. ಹಿಂದೂ ಸಮಾಜ ಎಲ್ಲಾ ಸಮುದಾಯಗಳನ್ನು ಒಪ್ಪಿ, ಅಪ್ಪಿಕೊಳ್ಳುವ ಸಮಾಜವಾಗಿದೆ. ದೇಶದ ಲಕ್ಷ ಲಕ್ಷ ಮಸೀದಿಗಳು, ಚರ್ಚ್ ಗಳು ನಮ್ಮ ಭೂಮಿಯಲ್ಲಿವೆ. ನಾವು ಅವರಿಗೆ ಜಾಗ ಕೊಟ್ಟಿದ್ದೇವೆ. ಆದರೂ ಹಿಂದೂ ಸಮಾಜ ಜಾತ್ಯತೀತ ವಿರೋಧಿನಾ ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com