
ಬೆಂಗಳೂರು: ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಐಐಎಂನಲ್ಲಿ ನಡೆಯುತ್ತಿರುವ ಆಯುಷ್ಮಾಠ್ 2020 ಆರೋಗ್ಯ ಶೃಂಗಸಭೆಯಲ್ಲಿ ಮಾತನಾಡಿರುವ ಅವರು, ಆಲೋಪತಿಯಲ್ಲದ ಚಿಕಿತ್ಸೆಗಳ ಅಡಿಯಲ್ಲಿ ಬರುವ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ಗಳನ್ನು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಳಲ್ಲಿ ಸೇರ್ಪಡೆಗೊಳಿಸಬೇಕಿದೆ. ಇವುಗಳು ಪರ್ಯಾಯ ಸಾಂಪ್ರದಾಯಿಕ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆನಾರೋಗ್ಯವನ್ನು ದೂರ ಇಡಲು ಪಾಲಿಧೆರಪಿ ಅಥವಾ ಪಾಲಿಫಾರ್ಮಸಿಯೊಂದಿಗೆ ಸಮಗ್ರ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
Advertisement