ಕರ್ನಾಟಕ ಬಂದ್: ರಸ್ತೆಗೆ ಇಳಿಯಲ್ಲ ಟ್ಯಾಕಿ, ಆಟೋ, ಖಾಸಗಿ ಬಸ್, ಏನಿರುತ್ತೆ? ಏನಿರಲ್ಲ?

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರುನಾಡು ಸ್ಥಬ್ದವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರುನಾಡು ಸ್ಥಬ್ದವಾಗಲಿದೆ.

ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ. ಆದರೆ ಟೌನ್ ಹಾಲ್ ನಲ್ಲಿ ಪ್ರತಿಭಟನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ಜಾಥ ನಡೆಯಲಿದೆ.

ನಾಳೆ ಏನಿರುತ್ತೆ?
* ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಪೇಪರ್
* ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇವೆ ಇರುತ್ತೆ(ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಸ್ಧಗಿತ ಸಾಧ್ಯತೆ)
* ನಮ್ಮ ಮೆಟ್ರೋ ರೈಲು ಸೇವೆ
* ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು(ಪರಿಸ್ಥಿತಿ ನೋಡಿ ತೀರ್ಮಾನ)
* ಬ್ಯಾಂಕ್, ಹೋಟೆಲ್, ಶಾಪಿಂಗ್ ಮಾಲ್
* ಎಪಿಎಂಸಿ, ಲಾರಿ ಸಂಚಾರ
* ಸಿನಿಮಾ ಥಿಯೇಟರ್, ಸಿನಿಮಾ ಶೂಟಿಂಗ್
* ಸರ್ಕಾರಿ ಕಚೇರಿಗಳು

ಏನಿರಲ್ಲ?
* ಸರ್ಕಾರಿ ಕಾರು ಓಡಿಸುವ ಚಾಲಕರು ಬಂದ್ ಗೆ ಬೆಂಬಲ
* ಎರಡು ಲಕ್ಷ ಆಟೋಗಳು ರಸ್ತೆಗೆ ಇಳಿಯುವುದಿಲ್ಲ
* ಒಂದೂವರೆ ಲಕ್ಷ ಓಲಾ, ಊಬರ್ ಟ್ಯಾಕ್ಸಿ ಸಂಚಾರ ಬಂದ್
* 25 ಸಾವಿರ ಮ್ಯಾಕ್ಸಿಕ್ಯಾಬ್, 10 ಸಾವಿರ ಏರ್ ಪೋರ್ಟ್ ಟ್ಯಾಕ್ಸಿ ಬಂದ್
* ಕೆಎಸ್ಟಿಡಿಸಿ, ಮೇರು, ಮೆಗಾ ಕ್ಯಾಬ್ ಗಳಿಂದಲೂ ಬಂದ್ ಗೆ ಬೆಂಬಲ
* 9 ಸಾವಿರ ಖಾಸಗಿ ಬಸ್ ಸೇರಿ ಆರು ಲಕ್ಷ ವಾಹನ ಓಡೋದಿಲ್ಲ
* 4 ಲಕ್ಷ ಸದಸ್ಯರಿಂದ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಬೆಂಬಲ
* ಬಟ್ಟೆಯಂಗಡಿ, ಚಾಟ್ಸ್, ತರಕಾರಿ, ಹೂವು-ಹಣ್ಣು ಇರಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com