ಮೊನ್ನೆ ಗಣಿತ, ನಿನ್ನೆ ಇಂಗ್ಲೀಷ್: ಮತ್ತೆ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ

ಕಳೆದ ಬಾರಿಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತು ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳವುದಾಗಿ ಶಿಕ್ಷಣ ಇಲಾಖೆ ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ. ಸತತವಾಗಿ ಗಣಿತ ಪ್ರಶ್ನೆಪತ್ರಿಕೆ ಬಳಿಕ ಇದೀಗ ಇಂಗ್ಲೀಷ್ ಪಶ್ನೆಪತ್ರಿಕೆ ಕೂಡ ಸೋರಿಕೆಯಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ಬಾರಿಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತು ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳವುದಾಗಿ ಶಿಕ್ಷಣ ಇಲಾಖೆ ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ. ಸತತವಾಗಿ ಗಣಿತ ಪ್ರಶ್ನೆಪತ್ರಿಕೆ ಬಳಿಕ ಇದೀಗ ಇಂಗ್ಲೀಷ್ ಪಶ್ನೆಪತ್ರಿಕೆ ಕೂಡ ಸೋರಿಕೆಯಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ರಾಜ್ಯಾದ್ಯಂತ ಸೋಮವಾರದಿಂದ ಆರಂಭಿಸಿದ ಎಸ್ಎಸ್ಎಲ್'ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸತತವಾಗಿ ಮಂಗಳವಾರ ಹಾಗೂ ಬುಧವಾರ ಸೋರಿಕೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಸತತ ಭರಸವೆ ನೀಡುತ್ತಾ ಬಂದಿದ್ದರೂ ಮಂಗಳವಾರ ಗಣಿತ ಹಾಗೂ ಬುಧವಾರ ದ್ವಿತೀಯ ಭಾಷೆ ಇಂಗ್ಲೀಷ್ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಪೂರ್ವ ಸಿದ್ಧತಾ ಪರಿಕ್ಷೆಯಲ್ಲಿಯೇ ಈ ಪರಿಸ್ಥಿತಿಯಾದರೇ ಅಂತಿಮ ಪರೀಕ್ಷೆಯಲ್ಲಿ ಏನಾಗಬಹುದು ಎಂಬ ಆತಂಕ ಪೋಷಕರನ್ನು ಇದೀಗ ಕಾಡಲು ಆರಂಭಿಸಿದೆ. 

ಬುಧವಾರ ಪರೀಕ್ಷೆ ಆರಂಬವಾದ ಕೆಲವೇ ನಿಮಿಷಗಳಲ್ಲಿ ಇಂಗ್ಲೀಷ್ ಭಾಷಾ ಪ್ರಶ್ನೆಪತ್ರಿಕೆಯು ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದೆ. ಈ ಬಗ್ಗೆ ಮಂಡಳಿಯಂದ ದೂರು ನೀಡಿರುವುದು ಹೊರತುಪಡಿಸಿ ಬೇರಾವುದೇ ಕ್ರಮಗಳಾಗಿಲ್ಲ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸರ್ಕಾರದಿಂದ ಹಾಗೂ ಮಂಡಳಿ ಸೂಚನೆ ನೀಡಿದ ಬಳಿಕವೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಮುಂದಿನ ತಿಂಗಳಿನಲ್ಲಿ ನಡೆಯಲರುವ ವಾರ್ಷಿಕ ಪರೀಕ್ಷೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಲಿವೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಪೂರ್ವ ಸಿದ್ಧತಾ ಪರೀಕ್ಷೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಪರೀಕ್ಷಾ ಮಂಡಳಿಗೂ ಸಹ ಅನ್ವಯವಾಗಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಶಿಕ್ಷಕರನ್ನು ಅಂತಿಮ ಪರೀಕ್ಷೆ ಸಂದರ್ಭದಲ್ಲಿ ಪೊಲೀಸರ ವಶಕ್ಕೆ ನೀಡುವುದಾಗಿ ನಿನ್ನೆಯಷ್ಟೇ ಮಂಡಳಿ ಎಚ್ಚರಿಕೆ ನೀಡಿದ್ದರೂ ಕೂಡ ಬುಧವಾರ ಬಳ್ಳಾರಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಮಂಡಳಿ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com