ಸಂಗ್ರಹ ಚಿತ್ರ
ರಾಜ್ಯ
ತುಮಕೂರು: ಭೀಕರ ರಸ್ತೆ ಅಪಘಾತ, ಬೆಂಗಳೂರು ಯುವತಿ, ಬಸ್ ಚಾಲಕ ದುರ್ಮರಣ!
ಹಿಂಬದಿಯಿಂದ ಲಾರಿಗೆ ಮಿನಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಗೇಟ್ ಬಳಿ ಸಂಭವಿಸಿದೆ.
ತುಮಕೂರು: ಹಿಂಬದಿಯಿಂದ ಲಾರಿಗೆ ಮಿನಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಮಿನಿ ಬಸ್ಸು ಚಾಲಕ ಕಿಶೋರ್(40), ಬಸ್ಸಿನಲ್ಲಿದ್ದ ಬೆಂಗಳೂರು ಮೂಲದ ಯುವತಿ ಪೂಜಾ(30) ಮೃತರು.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಿನಿ ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


