ಬಳ್ಳಾರಿ: ಸಚಿವರಿಂದಲೇ ರಸ್ತೆ ತಡೆದು ಪ್ರತಿಭಟನೆ

ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಸಚಿವ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಲಾರಿ ಮಾಲೀಕರ ಸಂಘದೊಂದಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಪ್ರತಿಭಟನಾಕಾರರೊಂದಿಗೆ ಆನಂದ್ ಸಿಂಗ್
ಪ್ರತಿಭಟನಾಕಾರರೊಂದಿಗೆ ಆನಂದ್ ಸಿಂಗ್
Updated on

ಬಳ್ಳಾರಿ: ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಸಚಿವ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಲಾರಿ ಮಾಲೀಕರ ಸಂಘದೊಂದಿಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಲಾರಿ ಮಾಲೀಕರಿಗೆ ಸಚಿವ್ ಆನಂದ್ ಸಿಂಗ್ ಸಹ ಸಾಥ್ ನೀಡಿದರು.

ಸಂಡೂರು ಬೈಪಾಸ್ ನಲ್ಲಿ ಲಾರಿಗಳನ್ನ ತಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರೋವರಿಗೂ ಪ್ರತಿಭಟನೆ ಮಾಡಲಾಗುವುದು. ಮುಷ್ಕರ ಕೈ ಬಿಡೋ ಮಾತೇ ಇಲ್ಲ ಆನಂದ್ ಸಿಂಗ್ ಹೇಳಿದ್ದಾರೆ.

ಅಧಿಕಾರಿಗಳಿಗೆ ಎಷ್ಟು ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದು, ರಸ್ತೆ ಕಾಮಗಾರಿ ಬೇಗ ಮುಗಿಸ್ತೀವಿ ಎಂದಿದ್ದ ಅಧಿಕಾರೊಗಳು ಈಗ ಉಲ್ಟಾ ಹೊಡೆದಿದ್ದಾರೆ‌ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣಕ್ಕಾಗಿ ಗ್ಯಾಮನ್ ಇಂಡಿಯ ಪಡೆದಿದ್ದ ಕಾಂಟ್ರ್ಯಾಕ್ಟ್ ರದ್ದಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com