ಗಂಗಾವತಿ: ದಿಢೀರ್ ಕುಸಿದ ಅಂಜನಾದ್ರಿ ಹನುಮನ ಆದಾಯ...!

ಐತಿಹಾಸಿ ಧಾರ್ಮಿಕ ತಾಣ, ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.
ಹಣ ಎಣಿಕೆ
ಹಣ ಎಣಿಕೆ

ಗಂಗಾವತಿ: ಐತಿಹಾಸಿ ಧಾರ್ಮಿಕ ತಾಣ, ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.

ಆದಾಯ ಕುಸಿತಕ್ಕೆ ವಿದೇಶಿ ಪ್ರವಾಸಿಗರ ತಾಣದ ಎತ್ತಂಗಡಿ, ಪ್ರವಾಸಿಗರ ಸಂಖ್ಯೆ ಇಳಿಮುಖ, ಹಬ್ಬಗಳ ಕೊರತೆ, ವಿಶೇಷ ದಿನಗಳು ಇಲ್ಲದಿರುವುದು, ಬೇಸಿಗೆ ಆರಂಭ... ಹೀಗೆ ನಾನಾ ಕಾರಣ ಕೊಡಲಾಗುತ್ತಿದೆ.

ಕಳೆದ ಜನವರಿಯ ತಿಂಗಳಲ್ಲಿ ಎಣಿಕೆ ಮಾಡಿದ್ದಾಗ ₹10.53 ಲಕ್ಷ ಆದಾಯ ಸಂಗ್ರಹವಾಗಿತ್ತು. ಆದರೆ ಶನಿವಾರ ಮಾಸಿಕ ಹುಂಡಿ ಎಣಿಕೆ   ಮಾಡಿದ್ದು ಫೆಬ್ರವರಿಯಲ್ಲಿ ₹6.51 ಲಕ್ಷ ಮಾತ್ರ ಸಂಗ್ರಹವಾಗಿದೆ. ಕೇವಲ ಒಂದು ತಿಂಗಳಲ್ಲಿ ಹನುಮನ ಆದಾಯ 4 ಲಕ್ಷ ರೂಪಾಯಿ ತಗ್ಗಿದೆ. 

ಈ ಪೈಕಿ ನಾನಾ ಮೌಲ್ಯದ ನಾಲ್ಕು ನೇಪಾಳ, ಎರಡು ಅಮೆರಿಕಾದ ‌ಕರೆನ್ಸಿ ಪತ್ತೆಯಾಗಿವೆ. ಅಲ್ಲದೇ ಏಳು ಅನ್ಯ ದೇಶದ ನಾಣ್ಯಗಳು ಪತ್ತೆಯಾಗಿವೆ. 

ತಹಸೀಲ್ದಾರ್ ಚಂದ್ರಕಾಂತ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ ಹೀರೆಮಠ ನೇತೃತ್ವದಲ್ಲಿ ಹಣ ಎಣಿಕೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com