ದುರುದ್ದೇಶದಿಂದ ಕಿರುಕುಳ: ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಡಿವೈಎಸ್‌ಪಿ ದೂರು, ವಿದಾಯ ಒಂದೆ ನನ್ನ ಮುಂದಿರೋ ಆಯ್ಕೆ!

ಹಿರಿಯ ಐಪಿಎಸ್ ಅಧಿಕಾರಿಗಳು ತಮಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಯೊಬ್ಬರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಪೊಲೀಸ್
ಪೊಲೀಸ್

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳು ತಮಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಯೊಬ್ಬರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಪ್ರಸ್ತುತ ಸಿಐಡಿ ಕ್ರಿಮಿನಲ್ ತನಿಖಾ ಘಟಕ(ಸಿಐಯು) ಮಂಗಳೂರು ವಿಭಾಗದ ಡಿವೈಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ರತ್ನಾಕರ್ ಈ ದೂರು ಸಲ್ಲಿಸಿದ್ದು, 15 ದಿನಗಳಲ್ಲಿ ತಮ್ಮ ನೋವಿಗೆ ಸ್ಪಂದಿಸದಿದ್ದಲ್ಲಿ ಸೇವೆಗೆ ವಿದಾಯ ಹೇಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆರು ವರ್ಷಗಳ ಹಿಂದಿನ ಬೆಂಗಳೂರು ಎಂಜಿ ರಸ್ತೆಯಲ್ಲಿ‌ ನಡೆದಿದ್ದ ಪ್ರಭಾವಿ ವ್ಯಕ್ತಿಯೋರ್ವನ ಪುತ್ರನೋರ್ವನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ರತ್ನಾಕರ್ ಆರೋಪಿಸಿದ್ದಾರೆ.

2013 ರ ಜೂನ್ ನಲ್ಲಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಟ್ರಿನಿಟಿ ಸರ್ಕಲ್ ನಲ್ಲಿ ನಡೆದ ಐಶಾರಾಮಿ ಕಾರೊಂದರ ಅಪಘಾತದಲ್ಲಿ ರಾಬರ್ಟ್ ಎಂಬಾತ ಮೃತಪಟ್ಟಿದ್ದನು. ಈ  ಸಂಬಂಧ ರಾಜಕೀಯ‌ ಮುಖಂಡನೋರ್ವನ ಪುತ್ರನನ್ನು ಬಂಧಿಸಲಾಗಿತ್ತು. 

ಈ ಘಟನೆಯ ತನಿಖಾ ಜವಾಬ್ದಾರಿ ಹೊತ್ತುಕೊಂಡಿದ್ದ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತಮ್ಮ ವಿರುದ್ಧ ಆರೋಪ ಹೊರಿಸಲಾಗಿದೆ. ಆದರೆ, ತಾವು ಘಟನೆ ನಡೆದ ಸಂದರ್ಭದಲ್ಲಿ ಅಶೋಕ ನಗರ ಠಾಣೆ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಯಾವುದೇ ತಪ್ಪಿಲ್ಲದಿದ್ದರೂ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ, ಹಿರಿಯ ಅಧಿಕಾರಿಗಳೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇದರಲ್ಲಿ ಡಿಜಿಪಿ, ಎಡಿಜಿಪಿ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮನ್ನು ಹಿರಿಯ ಐಪಿಎಸ್ ಅಧಿಕಾರಿಗಳು ಎರಡು ಬಾರಿ ಹಿಂಬಡ್ತಿ ನೀಡಿದ್ದಾರೆ ಎಂದಿರುವ ರವಿಕಾಂತ್, ದೂರಿನ ಪ್ರತಿಯಲ್ಲಿ ಉಲ್ಲೇಖಿಸಿರುವ 11 ಪ್ರಶ್ನೆಗಳನ್ನಿಟ್ಟು ಉತ್ತರಸದೇ ಇದ್ದಲ್ಲಿ ಸೇವೆಗೆ ವಿದಾಯ ಹೇಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com