

ತುಮಕೂರು: ಸಿದ್ದಗಂಗಾ ಮಠದೊಳಗೆ ವಸತಿ ಸಚಿವ ಸೋಮಣ್ಣ ಅವರ ಕಾರನ್ನು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್ಪಿ ಅನೂಪ್ ಶೆಟ್ಟಿ ಗರಂ ಆಗಿ ಕೂಗಾಡಿದ್ದಾರೆ.
ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್ಪಿ ರೇಗಾಡಿದ್ದಾರೆ.
ಸಿದ್ದಗಂಗಾ ಮಠದ 2ನೇ ಗೇಟ್ ನಲ್ಲಿ ಸೋಮಣ್ಣ ಕಾರನ್ನು ಒಳಗೆ ಬಿಟ್ಟಿದ್ದಕ್ಕೆ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಎಸ್ಪಿ ಅನೂಪ್ ಶೆಟ್ಟಿ, ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್ ಬರಲ್ಲ. ಒಂದು ಮೀಟಿಂಗ್ ಗೆ ಬರುವ ಯೋಗ್ಯತೆ ಇಲ್ಲ. ಟೈಮ್ ಪಾಸ್ ಮಾಡೋಕೆ ಬರುತ್ತೀರಾ ಇಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಯಾವುದೇ ಗಾಡಿ(ವಾಹನ) ಬಿಡಬಾರದು ಎಂದು ಹತ್ತು ಸಲ ಹೇಳಿದ್ದೀನಿ. ಮೂರು ದಿನಗಳಿಂದ ಏನು ಕಸ ಗುಡಿಸುತ್ತಿದ್ದೇವಾ ಇಲ್ಲಿ. ಅಯೋಗ್ಯ…ನಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಗಾಡಿ ಬಿಡಬಾರದು ಅಂದರೆ ಬಿಡಬಾರದು ಅಷ್ಟೇ ಎಂದು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.