ಬೋಗಿಯಲ್ಲಿ ಬೆೆಂಕಿ
ಬೋಗಿಯಲ್ಲಿ ಬೆೆಂಕಿ

ಕಲಬುರಗಿ ನಿಲ್ದಾಣದಲ್ಲಿ ಗೂಡ್ಸ್  ರೈಲಿನ ಬೋಗಿಯಲ್ಲಿ ಬೆಂಕಿ 

ಕಲಬುರಗಿಯಲ್ಲಿ  ಗೂಡ್ಸ್ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ. 
Published on

ಕಲಬುರಗಿ:  ಕಲಬುರಗಿಯಲ್ಲಿ  ಗೂಡ್ಸ್ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಗೂಡ್ಸ್ ವಾಹನದ ಸಿಬ್ಬಂದಿ ಕೂಡುವ ವಿಶೇಷ ಬೋಗಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ನಡೆದ ವೇಳೆ ಬೋಗಿಯಲ್ಲಿ 6 ಜನ ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಎಲ್ಲ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ ಬೆಂಕಿ ಹತ್ತಿದ ತಕ್ಷಣವೇ ಸಿಬ್ಬಂದಿ ಬೋಗಿ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. 

ರೈಲಿನಲ್ಲಿದ್ದ ಕೆಲ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಅವಘಡ  ವೇಳೆ ಗೂಡ್ಸ್ ವಾಹನ ಚಾಲನೆಯಲ್ಲಿ ಇರಲಿಲ್ಲ . ಅಗ್ನಿಶಾಮಕ ದಳ ಸಿಬ್ಬಂದಿ ಸಮಯಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com