ಬಾಗಲಕೋಟೆ: ನಾಟಕ ಪ್ರದರ್ಶನದ ಶೇ.೧೦ ರಷ್ಟು ಲಾಭಾಂಶ ವೀರ ಯೋಧರ ಕುಟುಂಬಕ್ಕೆ

ಬನದ ಹಣ್ಣಿಮೆಯಂದು ನಡೆಯಲಿರುವ ನಾಡಿನ ಇತಿಹಾಸ ಪ್ರಸಿದ್ದ ಬಾದಾಮಿ ಬನಶಂಕರಿ ದೇವಿ ಜಾತ್ರೆ ಈ ವರ್ಷ ಅನೇಕ ಹೊಸ ದಾಖಲೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ.
ರಕ್ತ ರಾತ್ರಿ ನಾಟಕದ ಪೋಸ್ಟರ್
ರಕ್ತ ರಾತ್ರಿ ನಾಟಕದ ಪೋಸ್ಟರ್
Updated on

ಬಾಗಲಕೋಟೆ: ಬನದ ಹಣ್ಣಿಮೆಯಂದು ನಡೆಯಲಿರುವ ನಾಡಿನ ಇತಿಹಾಸ ಪ್ರಸಿದ್ದ ಬಾದಾಮಿ ಬನಶಂಕರಿ ದೇವಿ ಜಾತ್ರೆ ಈ ವರ್ಷ ಅನೇಕ ಹೊಸ ದಾಖಲೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ.

ಹೌದ್ದ ಹುಲಿಯಾ ನಾಟಕ ಪ್ರದರ್ಶನಕ್ಕೆ ಸಜ್ಜಾಗುವ ಮೂಲಕ ನಾಡಿನಾದ್ಯಂತ ಭಾರಿ ಸುದ್ದಿ ಮಾಡಿರುವ ಜಾತ್ರೆಯಲ್ಲಿ ಸದ್ದಿದ್ದಲ್ಲದೆ ವೀರಯೋಧರನ್ನು ಸ್ಮರಿಸುವ ಮಹತ್ತರವಾದ ಕೆಲಸಕ್ಕೆ  ನಾಟಕ ಕಂಪನಿಯೊಂದು ಕೈ ಹಾಕಿದೆ.

ಕರ್ನಾಟಕದ ಶೆಕ್ಸ್ ಫೀಯರ್ ಎಂದು ಖ್ಯಾತರಾಗಿದ್ದ ನಾಡಿನ ರಂಗಭೂಮಿ ದಿಗ್ಗಜ ದಿ. ಕಂದಗಲ್ ಹಣಮಂತರಾಯರ ಹೆಸರನ್ನು ಕೇಳದವರೆ ಇಲ್ಲ. ನೂರಾರೂ ನಾಟಕಗಳನ್ನು ಬರೆದು ರಂಗಭೂಮಿಯ ಮೇಲೆ ಪ್ರಯೋಗ ಮಾಡಿ ನಾಟಕಾಸಕ್ತರಿಂದ ಹೌದು ಎನ್ನಿಸಿಕೊಂಡವರು. ಸಾಮಾಜಿಕ ನಾಟಕಗಳ ಜತೆ ಪೌರಾಣಿಕ ನಾಟಕಗಳನ್ನು ಬರೆದವರು.  “ರಕ್ತ ರಾತ್ರಿ” ಇವರು ಬರೆದ ಪೌರಾಣಿಕ ನಾಟಕ. ಒಂದು ಕಾಲಕ್ಕೆ ರಾಜ್ಯದಾದ್ಯಂತ ಜನಪ್ರಿಯತೆ ಪಡೆದ ನಾಟಕವಾಗಿತ್ತು.

ದಿ.ಕಂದಗಲ್ ಹಣಮಂತರಾಯರು ಬರೆದು ಈ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಬಾದಾಮಿ ತಾಲೂಕಿನ ಆಲೂರು ಎಸ್ ಕೆ ಗ್ರಾಮದ ಶ್ರೀ ಅಂಜಿನಿಪುತ್ರ ನಾಟ್ಯ ಸಂಘ ಸಜ್ಜಾಗಿದೆ. ಅರೇ ಅದರಲ್ಲೆನು ವಿಶೇಷ ಎಂದು ಹುಬ್ಬೇರಿಸಬಹುದಾಗಿದ್ದರೂ ಈ ನಾಟಕ ೪೦ ವರ್ಷಗಳ ಬಳಿಕ ಪ್ರದರ್ಶನಗೊಳ್ಳುತ್ತಿದೆ.

ಸಾಮಾಜಿಕ, ಐತಿಹಾಸಿಕ, ಹಾಸ್ಯ ಪ್ರಜ್ಞೆಯ ನಾಟಕಗಳ ಮಧ್ಯೆ ಪೌರಾಣಿಕ ನಾಟಕ ಏನು ನಡೆಯುತ್ತದೆ ಎಂದು ಮಾತನ್ನು ಸಹಜವಾಗಿ ತೆಗೆದುಕೊಳ್ಳುವಂತಿಲ್ಲ. ರಕ್ತರಾತ್ರಿ ನಾಟಕದ ಹೆಸರನ್ನು ಕೇಳಿದರೇ ರೋಮಾಂಚನ ಎನ್ನುವ ಹಳೆ ತಲೆಮಾರಿನ ನಾಟಕ ಪ್ರೀಯರು ಇದ್ದಾರೆ. ಇದೀಗ ಈ ನಾಟಕವನ್ನು ಹೊಸ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ನಾಟಕ ಕಂಪನಿಯ ಔದಾರ್ಯತೆಯನ್ನು ಸ್ಮರಿಸಲೇ ಬೇಕಾದ ಅಂಶ ಒಂದಿದೆ.

ಮೊದಲ ಬಾರಿಗೆ ಹೊಸ ತಂಡವೊಂದು “ರಕ್ತರಾತ್ರಿ” ಪೌರಾಣಿಕ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ “ರಕ್ತರಾತ್ರಿ”ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನದಿಂದ ಬರುವ ಲಾಭಾಂಶದಲ್ಲಿ ಶೇ. ೧೦ ರಷ್ಟನ್ನು ಕಂಪನಿಯು ವೀರ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ ಎನ್ನುವುದು ವಿಶೇಷ. 

ಕಂಪನಿ ಕಲಾವಿದರಿಗೆ ವೇತನ ನೀಡುವ ಕಷ್ಟ ಎನ್ನುವ ಈ ಕಾಲದಲ್ಲಿ ಹೊಸ ಕಂಪನಿ ವೀರ ಯೋಧರ ಕುಟುಂಬಗಳ ನೆರವಿಗೆ ಕಂಪನಿ ಮಾಲೀಕರಾದ ಸಂಗಮೇಶ್ ಎಚ್,ಉಮೇಶ್ ಕತ್ತಿ ,ವೀರಣ್ಣ ಇಟಗಿ ನಿರ್ಧರಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ

ಸ್ಥಳೀಯ ಕಲಾವಿದರು
ರಕ್ತರಾತ್ರಿ ನಾಟಕದಲ್ಲಿ ಶೇ. ೫೦ ರಷ್ಟು ಕಲಾವಿದರು ಸ್ಥಳೀಯರಾಗಿದ್ದು, ಇನ್ನುಳಿದ ಶೇ. ೫೦ ರಷ್ಟು ಕಲಾವಿದರು ಹೊರಗಿನವರಿದ್ದಾರೆ. ಕಂದಗಲ್ ಹನುಮಂತರಾಯ ರಕ್ತ ರಾತ್ರಿ ನಾಟಕವನ್ನು ಪುಲಿಕೇಶಿ, ನೀರಲಕೇರಿ ಎನ್ನುವರು ನಿರ್ದೇಶನ ಮಾಡುತ್ತಿದ್ದಾರೆ. ದ್ರೌಪದಿ ಪಾತ್ರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ನಾಗರತ್ನ ಅಭಿನಯಿಸಲಿದ್ದಾರೆ

ಬಾದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ ಮೊದಲ ಬಾರಿಗೆ ರಕ್ತ ರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲು ಸಿದ್ದವಾಗಿದ್ದು, ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಎಂದು ಕಾದುನೋಡಬೇಕಿದೆ

ವಿಠ್ಠಲ ಆರ್.ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com