ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ಸಿಎಎ ಪೌರತ್ವ ನೀಡುತ್ತದೆ, ಕಾಂಗ್ರೆಸ್ ಜನರ ಹಾದಿತಪ್ಪಿಸುತ್ತಿದೆ: ಅನುರಾಗ್ ಠಾಕೂರ್ 

ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಮುಸ್ಲಿಂ ಸಮುದಾಯವನ್ನು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದಾರಿತಪ್ಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ಬೆಳಗಾವಿ:ಕಾಂಗ್ರೆಸ್ ಪಕ್ಷದ ನಾಯಕರು ದೇಶದ ಮುಸ್ಲಿಂ ಸಮುದಾಯವನ್ನು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದಾರಿತಪ್ಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.


ಅವರು ನಿನ್ನೆ ಬೆಳಗಾವಿಯಲ್ಲಿ ಬಿಜೆಪಿ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕಾಯ್ದೆಯಲ್ಲಿ ಪೌರತ್ವ ಸಿಗುತ್ತದೆಯೋ ಹೊರತು ಕಸಿದುಕೊಳ್ಳುವುದಿಲ್ಲ ಎಂದರು.


2009ರಲ್ಲಿ ಬಂಧನ ಕೇಂದ್ರಗಳನ್ನು ಅಸ್ಸಾಂನಲ್ಲಿ ಸ್ಥಾಪಿಸಲಾಯಿತು. ಆಗ ಕಾಂಗ್ರೆಸ್ ಸರ್ಕಾರದಲ್ಲಿ ತರುಣ್ ಗೊಗೊಯ್ ಸಿಎಂ ಆಗಿದ್ದರು. ಅಂದು ಬಿಜೆಪಿ ಸರ್ಕಾರವಿರಲಿಲ್ಲ. ಈ ವಾಸ್ತವ ಬಹಿರಂಗವಾದ ನಂತರ ರಾಹುಲ್ ಗಾಂಧಿಯವರು ಸುಳ್ಳು ಹೇಳುವ ಕಲೆ ಕರಗತ ಮಾಡಿಕೊಂಡಿದ್ದಾರೆ. ದೇಶ ಬಿಟ್ಟು ವಿದೇಶಗಳಲ್ಲಿ ರಜೆ ಎಂದು ಮಜಾ ಮಾಡುತ್ತಿರುತ್ತಾರೆ ಎಂದರು.


ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಕಾಪಾಡಲು ಸಿಎಎ ಆಗಿದೆ ಎಂದು ಠಾಕೂರ್ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com