
ಚಾಮರಾಜನಗರ: ಇಲ್ಲಿನ ಹನೂರು ತಾಲೂಕಿನ ಕಾವೇರಿ ಅಭಯಾರಣ್ಯದಲ್ಲಿ ಶುಕ್ರವಾರ ಮುಂಜಾನೆ ಹಠಾತ್ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕನಿಷ್ಠ ಆರು ಎಕರೆ ಭೂಮಿಯನ್ನು ಭಸ್ಮಗೊಳಿಸಿದೆ
ಕೊಥನೂರು ವನ್ಯಜೀವಿ ಪ್ರಾಂತ್ಯದ ಸುಂದ್ರಳ್ಳೀ ಮತ್ತು ಮಧುವಿನಗುಡಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಬೆಳಗ್ಗೆ 6ಕ್ಕೆ ಮಾಹಿತಿ ದೊರೆಯಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಎಸ್.ರಮೇಶ್ ಹೇಳಿದ್ದಾರೆ
Advertisement