ಪ್ರತಿಪಕ್ಷಗಳ ಟೀಕೆಯ ಬಳಿಕ ಎಚ್ಚೆತ್ತ ಸರ್ಕಾರ: ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಬ್ರೇಕ್

ರೈತರ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಸಹಕಾರ ಸಂಘಗಳ ನಿಬಂಧಕರು ಮರು ಆದೇಶ ಹೊರಡಿಸಿದ್ದು,ಸಾಲ ಮರುಪಾವತಿಯ ಆತಂಕಕ್ಕೆ‌ ಸಿಲುಕಿದ್ದ‌ ರೈತ ನಿಟ್ಟುಸಿರು ಬಿಡುವಂತಾಗಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ರೈತರ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಸಹಕಾರ ಸಂಘಗಳ ನಿಬಂಧಕರು ಮರು ಆದೇಶ ಹೊರಡಿಸಿದ್ದು,ಸಾಲ ಮರುಪಾವತಿಯ ಆತಂಕಕ್ಕೆ‌ ಸಿಲುಕಿದ್ದ‌ ರೈತ ನಿಟ್ಟುಸಿರು ಬಿಡುವಂತಾಗಿದೆ.

2016-17ನೇ ಸಾಲಿನ 20 ಅಕ್ಟೋಬರ್ 2016 ರಂದು ರಾಜ್ಯ 110 ತಾಲೂಕುಗಳನ್ನು ಬರಪೀಡತ ತಾಲೂಕುಗಳೆಂದು ಘೋಷಿಸಿತ್ತು.ಸರ್ಕಾರದ ಆದೇಶದಿಂದಾಗಿ ರೈತರಿಂದ ಸಾಲ ವಸೂಲಾತಿ,ನೋಟೀಸ್ ನೀಡುವುದು,ಆಸ್ತಿ ಜಪ್ತಿ ಮಾಡದಂತೆ ಸರ್ಕಾರ ನಿರ್ದೇಶ ನದ ಹಿನ್ನಲೆಯಲ್ಲಿ ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆ ಹೊರಡಿಸಿದ್ದರು .ಬಳಿಕ 27 ಡಿಸೆಂಬರ್ 2019ರಲ್ಲಿ ಮತ್ತೊಂದು ಸುತ್ತೋಲೆ ಹೊರಿಡಿಸಿ 2016ರ ಆದೇಶವನ್ನು ರದ್ದುಪಡಿಸಿರುವುದಾಗಿ ಆದೇಶ ಹೊರಿಡಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.

ಆದರೆ ಇಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂಥೆ ಈ ಹಿಂದೆ ನೀಡಲಾದ ಆದೇಶ ಹಿಂಪಡೆಯಲಾಗಿದೆ. ಈ ಕುರಿತು ಬ್ಯಾಂಕುಗಳು ತಕ್ಷಣ ಹೊಸ ಆದೇಶ ಜಾರಿಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com