ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಹಾಸನದ ಬುಡುಕಟ್ಟು ದಂಪತಿ ಆಯ್ಕೆ

ಇದೇ 26 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಇದೇ ಮೊದಲ ಬಾರಿಗೆ ಹಾಸನದ ಬುಡಕಟ್ಟು ದಂಪತಿ ಆಯ್ಕೆಯಾಗಿದ್ದಾರೆ.
ಹೂರಾಜ್ ಮತ್ತು ಚಂದೋಸ್
ಹೂರಾಜ್ ಮತ್ತು ಚಂದೋಸ್

ಹಾಸನ:  ಇದೇ 26 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಇದೇ ಮೊದಲ ಬಾರಿಗೆ ಹಾಸನದ ಬುಡಕಟ್ಟು ದಂಪತಿ ಆಯ್ಕೆಯಾಗಿದ್ದಾರೆ.

ಹಾಸನ ಜಿಲ್ಲೆಯ ಅಂಗಡಿಹಳ್ಳಿ  ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ  ಹೂರಾಜ್ ಮತ್ತು ಚಂದೋಸ್  ದಂಪತಿ, ಜನವರಿ 27ರಂದು ರಾಷ್ಟ್ರಪತಿ ಕಚೇರಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಕರ್ನಾಟಕದಿಂದ ಎರಡು ಕುಟುಂಬವನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಆಯ್ಕೆ ಕುರಿತಂತೆ ಸಂತಸ ವ್ಯಕ್ತಪಡಿಸಿರುವ ಹೂರಾಜ್ ಮತ್ತು ಚಂದೋಸ್, ದೇವರು  ನಮಗೆ ಈ ಅವಕಾಶ ನೀಡಿದ್ದು, ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗಮನಕ್ಕೆ ತರಲಾಗುವುದು ಎಂದು ಅವರು  ಸಂತಸ ವ್ಯಕ್ತಪಡಿಸಿದ್ದಾರೆಯ 

ಸಮಗ್ರ ಬುಡುಕಟ್ಟು ಇಲಾಖೆ ನೋಡಲ್ ಅಫೀಸರ್ ಮೂಲಕ ನವದೆಹಲಿಗೆ ಈ ದಂಪತಿಯನ್ನು ಆಹ್ವಾನಿಸಲಾಗಿದೆ. ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಅವರನ್ನು ಬೀಳ್ಗೊಡುಗೆ ನೀಡಲಾಗುತ್ತದೆ. ನಂತರ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲಿದ್ದಾರೆ. ವಿಮಾನದ ಟಿಕೆಟ್, ಊಟ- ವಸತಿ ಎಲ್ಲ ವೆಚ್ಚಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯವೇ ಭರಿಸಲಿದೆ. 
 
ವಿಶೇಷ ಆಹ್ವಾನಿತರಿಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ದೃಶ್ಯ ವೀಕ್ಷಣೆ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ವಿವಿಧ ವಲಯದ ಸಂಪ್ರದಾಯ, ಕಲೆ ಮತ್ತು ಸಂಸ್ಕೃತಿ ವಿನಿಮಯ ಉದ್ದೇಶದಿಂದ ವಿವಿಧ ಕಡೆಗಳಿಂದ ಜನರನ್ನು ಆಯ್ಕೆ ಮಾಡಲಾಗಿದೆಯ ನವದೆಹಲಿ ಸುತ್ತಮುತ್ತಲಿನ ಪ್ರವಾಸ ಸ್ಥಳಗಳಿಗೂ ಇವರು ಭೇಟಿ ನೀಡಲಿದ್ದಾರೆ ಎಂಬುದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com