ಹಗಲು ಪೊಲೀಸ್, ರಾತ್ರಿ ಕಲಾವಿದ: ಹಾವೇರಿ ಜಿಲ್ಲೆಯ ವ್ಯಕ್ತಿಯ ಯಶೋಗಾಥೆ 

ಇಂದಿನ ವೇಗದ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಜೀವನ ಮತ್ತು ವೃತ್ತಿಯ ನಡುವೆ ಸಮತೋಲನ ಸಾಧಿಸುವುದು ಅತಿ ಮುಖ್ಯ. ಇದರ ಮಧ್ಯೆ ಮೈ ಮನ ಸಂತೋಷಕ್ಕೆ ಕೆಲವೊಂದು ಹವ್ಯಾಸಗಳನ್ನಿರಿಸಿಕೊಂಡರೆ ಉತ್ತಮ. 
ಹನುಮಂತಪ್ಪ ಹಂಚಿನಮನಿಯವರ ಮನೆ
ಹನುಮಂತಪ್ಪ ಹಂಚಿನಮನಿಯವರ ಮನೆ
Updated on

ಹಾವೇರಿ: ಇಂದಿನ ವೇಗದ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಜೀವನ ಮತ್ತು ವೃತ್ತಿಯ ನಡುವೆ ಸಮತೋಲನ ಸಾಧಿಸುವುದು ಅತಿ ಮುಖ್ಯ. ಇದರ ಮಧ್ಯೆ ಮೈ ಮನ ಸಂತೋಷಕ್ಕೆ ಕೆಲವೊಂದು ಹವ್ಯಾಸಗಳನ್ನಿರಿಸಿಕೊಂಡರೆ ಉತ್ತಮ. 


ಹಾವೇರಿ ಜಿಲ್ಲೆಯ ಮೀಸಲು ಸೇನಾಪಡೆಯ ಹೆಡ್ ಕಾನ್ಸ್ಟೇಬಲ್ 43 ವರ್ಷದ ಹನುಮಂತಪ್ಪ ಹಂಚಿನ್ಮನಿ ಅವರು ವೃತ್ತಿಯ ಜೊತೆ ತಮ್ಮ ಕಲೆಯ ಮೇಲಿನ ಪ್ರೀತಿಯನ್ನು ಜೀವಂತವಾಗಿರಿಸಿದ್ದಾರೆ. ಅಪರಾಧ ವಿರುದ್ಧ ಹೋರಾಟ ನಡೆಸುವುದು ಅವರ ವೃತ್ತಿಯಾದರೆ ಪೈಂಟಿಂಗ್ ಮಾಡುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಹಾವೇರಿಯಲ್ಲಿ ಹೊಸದಾಗಿ ಕಟ್ಟಿಸಿರುವ ತಮ್ಮ ಮನೆಯನ್ನು ಹಂಚಿನಮನಿ ಸ್ಟಾಟ್ ಲೈಟ್ ಆರ್ಟ್ ಗ್ಯಾಲರಿ ಎಂದು ಮಾಡಿಕೊಂಡಿದ್ದಾರೆ.


ಹಂಚಿನಮನಿ ಪೊಲೀಸ್ ಪಡೆಗೆ ಸೇರಿದ್ದು 1999ರಲ್ಲಿ. ಅವರ ಕನಸು ಸಾಕಾರಗೊಂಡಿದ್ದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ. ಇಲ್ಲಿ ಕಲಾವಿದರು ತಮ್ಮ ಚಿತ್ರಕಲೆ, ಪೈಂಟಿಂಗ್ ಗಳನ್ನು ಉಚಿತವಾಗಿ ಪ್ರದರ್ಶಿಸಬಹುದು. ತಮ್ಮದೇ ವಿನ್ಯಾಸದಲ್ಲಿ ಗ್ಯಾಲರಿ ನಿರ್ಮಿಸಿದ ಹಂಚಿನಮನಿಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಮನೆಯ ಮೊದಲ ಮಹಡಿ ಈ ಗ್ಯಾಲರಿಗೆ ಮೀಸಲು, ಅವರು ಮತ್ತು ಅವರ ಕುಟುಂಬಿಕರ ವಾಸ ನೆಲಮಹಡಿಯಲ್ಲಿ.


ಅತ್ಯಾಧುನಿಕ ಶೈಲಿಯಲ್ಲಿ ಉನ್ನತ ತಂತ್ರಜ್ಞಾನದೊಂದಿಗೆ ಈ ಗ್ಯಾಲರಿ ನಿರ್ಮಿಸಲಾಗಿದೆ. 50ರಿಂದ 60 ಚಿತ್ರಕಲೆಗಳನ್ನು ಪ್ರದರ್ಶನ ಮಾಡಬಹುದು. ಉತ್ತರ ಕರ್ನಾಟಕದ ಚಿತ್ರಕಲಾವಿದರಿಗೆ ಹಂಚಿನಮನಿಯವರ ಕಲಾ ಗ್ಯಾಲರಿ ಒಂದು ಉತ್ತಮ ಪ್ರದರ್ಶನಾ ವೇದಿಕೆಯಾಗಿದೆ.


ಹಂಚಿನಮನಿಯವರ ಕಲೆ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ಪ್ರದರ್ಶನಗೊಂಡಿವೆ. 2010ರಿಂದ ಭಾರತದ ಹಲವು ಕಡೆಗಳಲ್ಲಿ ಕೂಡ ಪ್ರದರ್ಶಿಸಿದ್ದಾರೆ. ವಿದೇಶಿ ಕಲಾವಿದರ ಪೈಂಟಿಂಗ್ ಗಳು ತಮ್ಮ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಬೇಕೆಂಬುದು ಅವರ ಆಸೆಯಾಗಿದೆ. 


ಇವರ ಪ್ರತಿಭೆ ಗುರುತಿಸಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ 2013ರಲ್ಲಿ ಪ್ರದರ್ಶನಗೊಂಡಿದೆ. 2016ರಲ್ಲಿ ರಾಷ್ಟ್ರೀಯ ಮಟ್ಟದ ಗೋಲ್ಡನ್ ಸ್ಟ್ರೋಕ್ ಅವಾರ್ಡ್ ಗಿಟ್ಟಿಸಿಕೊಂಡಿದ್ದರು. ಹಾವೇರಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ 2011ರಲ್ಲಿ, ಡಿ ವಿ ಹಾಲಬಾವಿ ಯುವ ಕುಂಚ ಕಲಾ ಶ್ರೀ ರಾಷ್ಟ್ರೀಯ ಪ್ರಶಸ್ತಿ 2015ರಲ್ಲಿ, ಮೈಸೂರು ದಸರಾ ಪ್ರಶಸ್ತಿ 2009ರಲ್ಲಿ ಅವರನ್ನು ಅರಸಿಕೊಂಡು ಬಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com