• Tag results for ಪೊಲೀಸ್

ಮದ್ದೂರು: ಕಾರ್ಖಾನೆ ಕ್ಯಾಂಟೀನ್​​ ಊಟ ತಿಂದು 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ

ಕ್ಯಾಂಟೀನ್‌ನಲ್ಲಿ ಊಟ ಮಾಡಿದ 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ  ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ  ಕಾರ್ಖಾನೆಯೊಂದರಲ್ಲಿ ನಡೆದಿದೆ.

published on : 13th October 2019

ಮಾಡ್ರನ್ ಆಗಿಲ್ಲ ಅಂತ ಹೆಂಡ್ತಿಗೆ ತಲಾಖ್ ಕೊಟ್ಟ ಭೂಪ!

ಹೆಂಡ್ತಿ ಮಾಡ್ರನ್ ಅಗಿಲ್ಲ ಎಂದು ಹೇಳಿ ತಲಾಖ್ ಕೊಟ್ಟಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

published on : 13th October 2019

ಪರಮೇಶ್ವರ್ ಪಿಎ ಆತ್ಮಹತ್ಯೆ :ಜ್ಞಾನಭಾರತಿ ಠಾಣೆಯಲ್ಲಿ ಎಫ್ ಐಆರ್ ದಾಖಲು

ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

published on : 13th October 2019

ಕೋಲಾರ: ಬಾಲಕಿ ಅತ್ಯಾಚಾರ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಮೇಲೆ ಕೆಜಿಎಫ್ ರಾಬರ್ಟ್ ಸನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸೂರ್ಯ ಪ್ರಕಾಶ್ ಅವರು ಗುಂಡು ಹಾರಿಸಿದ್ದಾರೆ.

published on : 11th October 2019

740 ಕೋಟಿ ರೂ. ವಂಚನೆ: ರಾನ್‌ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

740 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಅತೀ ದೊಡ್ಡ ಔಷಧಿಗಳ ಮಾರಾಟ ಮತ್ತು ತಯಾರಿಕಾ ಕಂಪನಿ ರಾನ್‌ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

published on : 10th October 2019

ಪ್ರೀತಿ ಹೆಸರಲ್ಲಿ ಮರ್ಡರ್: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿದ ಕಟುಕ, ಜ್ವಾಲೆಯಲ್ಲಿ ಸತ್ತ! 

ಪ್ರೀತಿಯ ಹೆಸರಲ್ಲಿ ಕೇರಳದಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ಪ್ರೀತಿ ನಿರಾಕಸಿದ್ದಕ್ಕೆ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಯುವತಿಗೆ ಯುವಕನೊಬ್ಬ ಬೆಂಕಿ ಹಚ್ಚಿ ಕೊಂದಿದ್ದಾನೆ. ನಂತರ ಉರಿಯುತ್ತಿರುವ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ತಾನೂ ಸತ್ತಿರುವ ಘಟನೆ ಕಳೆದ ರಾತ್ರಿ ಕೊಚ್ಚಿಯಲ್ಲಿ ನಡೆದಿದೆ.

published on : 10th October 2019

ಪಿಎಂ ಮೋದಿಗೆ ಬಹಿರಂಗ ಪತ್ರ: 49 ಗಣ್ಯರ ವಿರುದ್ಧದ ದೇಶದ್ರೋಹ ಪ್ರಕರಣ ಮುಚ್ಚಲು ಬಿಹಾರ ಪೊಲೀಸರು ಆದೇಶ

ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಧ್ವನಿ ಎತ್ತಿ  ಮಧ್ಯಸ್ಥಿಕೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗವಾಗಿ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಮುಚ್ಚಲು ಬಿಹಾರದ ಮುಜಾಫರ್ ಪುರ್ ಪೊಲೀಸರು ಆದೇಶಿಸಿದ್ದಾರೆ 

published on : 10th October 2019

ಮಹಾರಾಷ್ಟ್ರ: ಮತ್ತೆ ಏಳು ನಕ್ಸಲರ ಶರಣಾಗತಿ, ಹೊಸ ಬದುಕು ಕಟ್ಟಿಕೊಳ್ಳಲು ಪೊಲೀಸರ ನೆರವು  

ಮಹಾರಾಷ್ಟ್ರದಲ್ಲಿ ಮತ್ತೆ ಏಳು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗಿದ್ದು, ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ.

published on : 9th October 2019

ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ಚುರುಕುಗೊಂಡ ಶೋಧ ಕಾರ್ಯಾಚರಣೆ

ಭಾರತ-ಪಾಕ್ ಗಡಿಯ ಭಾರತೀಯ ಭೂಪ್ರದೇಶ ಫಿರೋಜ್‌ಪುರದಲ್ಲಿ ಸೋಮವಾರ  ರಾತ್ರಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಪಂಜಾಬ್ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ತುರ್ತು ನಿಗಾ ವಹಿಸಿವೆ.

published on : 8th October 2019

ಮತ್ತೆ ಬಣ್ಣ ಹಚ್ಚಲಿರುವ ಶ್ವೇತಾ ಶ್ರೀವಾತ್ಸವ್ : ಪೊಲೀಸ್ ಪಾತ್ರದಲ್ಲಿ ಕಮ್ ಬ್ಯಾಕ್ 

ಸುಮಾರು ಮೂರು ವರ್ಷಗಳಿಂದ ನಟನೆಯಿಂದ ದೂರು ಉಳಿದಿದ್ದ ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾತ್ಸವ್  ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಲು ಸಜ್ಜಾಗಿದ್ದಾರೆ.

published on : 7th October 2019

18 ಕೋಟಿ ರೂ. ವಂಚನೆ ಪ್ರಕರಣ: ಟಿವಿ 9 ಮಾಜಿ ಸಿಇಒ ರವಿ ಪ್ರಕಾಶ್ ಬಂಧನ

ಟಿವಿ 9 ವಾಹಿನಿ ಪ್ರವರ್ತಕ ಸಂಸ್ಥೆಯಾದ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಎಬಿಸಿಎಲ್)ಯ 18 ಕೋಟಿ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ  ಬಹುಭಾಷಿಕ ಸುದ್ದಿವಾಹಿನಿ ಟಿವಿ 9 ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ಪ್ರಕಾಶ್‌ ಅವರನ್ನು ಇಲ್ಲಿನ ಬಂಜಾರ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.

published on : 6th October 2019

ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ಎಂಡಿ ಥಾಮಸ್ ಅ.17ರವರೆಗೆ ಪೋಲೀಸ್ ವಶಕ್ಕೆ

4,355 ಕೋಟಿ ರೂ.ಪಿಎಂಸಿ ಬ್ಯಾಂಕ್ ಹಗರಣ ಸಂಬಂಧಿಸಿ ಬಂಧಿಸಲ್ಪಟ್ಟ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನುಅಕ್ಟೋಬರ್ 17 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

published on : 5th October 2019

ಚಳ್ಳಕೆರೆ: ಸಾಣೇಕೆರೆ ಬಳಿ ಅಪಘಾತ, ಬಸ್-ಟ್ರಕ್ ಡಿಕ್ಕಿ, ಮೂವರ ದುರ್ಮರಣ

ಚಳ್ಳಕೆರೆ ತಾಲೂಕಿನ ಸಾಣೇಕೆರೆ ಬಳಿ ಇಂದು ಬೆಳಗ್ಗೆ ವಾಯುವ್ಯ ಸಾರಿಗೆ ಸಂಸ್ಥೆ ಬಸ್, ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.

published on : 5th October 2019

ಅವ್ಯವಹಾರ ಮುಚ್ಚಿಡಲು ಪಿಎಂಸಿ ಬ್ಯಾಂಕ್ ನಿಂದ ಬರೋಬ್ಬರಿ 21 ಸಾವಿರ ನಕಲಿ ಖಾತೆ ಸೃಷ್ಟಿ!

ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.

published on : 5th October 2019

ಮಧ್ಯರಾತ್ರಿ ಕ್ಯಾಬ್ ಚಾಲಕರು ಮಹಿಳೆಯರನ್ನು ಕೆಳಗಿಳಿಸುವಂತಿಲ್ಲ: ಪೊಲೀಸ್ ಆಯುಕ್ತರ ಖಡಕ್ ಸೂಚನೆ

ಕ್ಯಾಬ್ ಡ್ರೈವರ್ ಗಳು ಕತ್ತಲಾದ ಮೇಲೆ ಮಹಿಳೆಯರನ್ನು ಮಧ್ಯೆ ದಾರಿಯಲ್ಲಿ ಇಳಿಸಿಹೋದರೆ ಅಂಥವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಎನ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

published on : 3rd October 2019
1 2 3 4 5 6 >