ಮಂಗಳಮುಖಿಯರಿಂದ ನಿರ್ವಾಹಕನ ಮೇಲೆ ಹಲ್ಲೆ

ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಂಡಕ್ಟರ್
ಹಲ್ಲೆಗೊಳಗಾದ ಕಂಡಕ್ಟರ್
Updated on: 

ಗಂಗಾವತಿ: ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.

ಗಲಾಟೆಯಲ್ಲಿ ಶಿವಮೊಗ್ಗ ಡಿಪೋದ ಕಂಡಕ್ಟರ್ ದಾದೇಸಾಬ್​​ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿವಮೊಗ್ಗದಿಂದ ರಾಯಚೂರಿಗೆ ಹೊರಟಿದ್ದ ಬಸ್​​ನಲ್ಲಿ ಜುಲಾಯಿ ನಗರದಲ್ಲಿ ಮಂಗಳಮುಖಿಯರು ಹತ್ತಿದ್ದಾರೆ‌. ಅಲ್ಲಿಂದ‌ ಮರಳಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. 

ಮರಳಿಗೆ  ಬಸ್​​ಸ್ಟಾಪ್ ಇಲ್ಲ. ಸಿದ್ದಾಪುರ ಟಿಕೆಟ್ ಕೊಡ್ತೀನಿ ಅಂತ ಕಂಡಕ್ಟರ್ ದಾದೇಸಾಬ್ ಹೇಳಿದ್ದಾರೆ. ಇದರಿಂದ ನಮಗೆ ಮರಳಿ ಟೋಲ್ ಗೇಟ್​ಗೆ ಟಿಕೆಟ್ ಕೊಡಲೇಬೇಕು ಎಂದು ಮಂಗಳಮುಖಿಯರು ಪಟ್ಟು ಹಿಡಿದಿದ್ದಾರೆ. ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಕಂಡಕ್ಟರ್ ಮುಖಕ್ಕೆ ರಕ್ತ ಬರುವ ಹಾಗೆ ಮಂಗಳಮುಖಿಯರು ಥಳಿಸಿದ್ದಾರೆ ಎನ್ನಲಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com