ಬೆಂಗಳೂರು: ಕಂಬಿ ಹಿಂದೆಯೇ ಇದ್ದು ಉನ್ನತ ವಿದ್ಯಭ್ಯಾಸ ಪಡೆದ 78 ಕೈದಿಗಳು!

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 78 ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ  ಮಾಡಿದ್ದಾರೆ. ಕಾರಾಗೃಹ ಇಲಾಖೆ ಕೂಡ ಇವರ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 78 ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ  ಮಾಡಿದ್ದಾರೆ. ಕಾರಾಗೃಹ ಇಲಾಖೆ ಕೂಡ ಇವರ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಿದೆ.

ಇಲ್ಲಿಉನ್ನತ ವ್ಯಾಸಂಗ ಪಡೆಯುತ್ತಿರುವ ಸುಮಾರು 78 ಕೈದಿಗಳು, ಪತ್ರಿಕೋದ್ಯಮ, ಅಪರಾಧ ನ್ಯಾಯ ವ್ಯವಸ್ಛೆ, ಸಹಕಾರ, ಕಾನೂನು ಮತ್ತು ವ್ಯಾಪಾರ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆ,  ಕೈದಿಗಳಿಗೆ ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಾಗುವಂತೆ ಸುಧಾರಣೆ ಮತ್ತು ಪುನರ್ವಸತಿ ಕಲ್ಪಿಸುವುದು ತನ್ನ ಪ್ರಧಾನ ಉದ್ದೇಶ ಎಂಬುದಾಗಿ ಘೋಷಿಸಿದೆ. ಶಿಕ್ಷಣ ನೀಡುವುದರಿಂದ ಅಪರಾಧ ಪ್ರಕರಣಗಳನ್ನು ತಪ್ಪಿಸುವುದು ಹಾಗೂ ಮತ್ತೆ ಪುನಃ ಅಂತ ತಪ್ಪುಗಳನ್ನು ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಕಾರಾಗೃಹ ಇಲಾಖೆ ಡಿಜಿಪಿ ಎನ್ ಮೆಘರಿಕ್ ಹೇಳಿದ್ದಾರೆ.

ಪರೀಕ್ಷೆ ತೆಗೆದುಕೊಂಡಿರುವ 78 ಕೈದಿಗಳ ಪೈಕಿ 20 ಮಹಿಳೆಯರಿದ್ದಾರೆ, ಅವರಲ್ಲಿ ಬಹುತೇಕರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುತ್ತಿದ್ದಾರೆ.  ಇವರ ಉನ್ನತ ವ್ಯಾಸಂಗಕ್ಕಾಗಿ ಅರೆಕಾಲಿಕ ಅಥವಾ ದೂರಶಿಕ್ಷಣ ಕಾರ್ಯಕ್ರಮಗಳನ್ನು ಮುಕ್ತ ವಿವಿಗಳು ನಡಲಿವೆ.  

ಪರೀಕ್ಷೆ ಪಡೆದುಕೊಂಡಿರುವ ಬಹುತೇಕ ಕೈದಿಗಳು ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೊಳಗಾಗಿರುವವರು, ಇವರಲ್ಲಿ ಹಲವರ ಮನಸು ಮತ್ತು ಹೃದಯ ಈಗಾಗಲೇ ಪರಿವರ್ತನೆಗೊಂಡಿದೆ.

ಪತ್ನಿ ಕೊಲೆ ಮಾಡಿ ಜೈಲು ಶಿಕ್ಷೆಗೊಳಗಾಗಿರುವ ಕೈದಿಯೊಬ್ಬ ಅಪರಾಧ ನ್ಯಾಯ ವ್ಯವಸ್ಥೆ ಕುರಿತ ಸ್ನಾತಕೋತ್ತರ ಡಿಪ್ಲಮಾ ಕೋರ್ಸ್ ಪಡೆದಿದ್ದಾರೆ.

ಜೈಲಿನ ಒಳಗೆ ಇರುವಾಗ ಪದವಿ ಅಧ್ಯಯನ ಮಾಡುವುದು  ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತದೆ.  ಹಾಗೂ ಬಿಡುಗಡೆಯಾದ ನಂತರ ವಿಭಿನ್ನ ಜೀವನವನ್ನು ನಡೆಸಲು ವಾಸ್ತವಿಕ ದಾರಿ ತೋರುತ್ತದೆ ಎಂದು ಕೈದಿಯೊಬ್ಬ ಅಭಿಪ್ರಾಯ ಪಟ್ಟಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com