ಬೆಂಗಳೂರು: ರೌಡಿಶೀಟರ್ ಮಶಾಣ ಲೋಕಿ ಹತ್ಯೆ, ಒಂಭತ್ತು ಜನರ ಬಂಧನ

ಇತ್ತೀಚೆಗೆ ನಡೆದ ರೌಡಿಶೀಟರ್ ಲೋಕೇಶ್ ಅಲಿಯಾಸ್ ಮಶಾಣ ಲೋಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಭತ್ತು ಜನರನ್ನು ಬಂಧಿಸಿದ್ದಾರೆ.
ಬೆಂಗಳೂರು: ರೌಡಿಶೀಟರ್ ಮಶಾಣ ಲೋಕಿ ಹತ್ಯೆ, ಒಂಭತ್ತು ಜನರ ಬಂಧನ
ಬೆಂಗಳೂರು: ರೌಡಿಶೀಟರ್ ಮಶಾಣ ಲೋಕಿ ಹತ್ಯೆ, ಒಂಭತ್ತು ಜನರ ಬಂಧನ
Updated on: 

ಬೆಂಗಳೂರು:  ಇತ್ತೀಚೆಗೆ ನಡೆದ ರೌಡಿಶೀಟರ್ ಲೋಕೇಶ್ ಅಲಿಯಾಸ್ ಮಶಾಣ ಲೋಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಭತ್ತು ಜನರನ್ನು ಬಂಧಿಸಿದ್ದಾರೆ.

ಹೇಮಂತ್ (25), ಸಾಗರ್ (22), ಪ್ರವೀಣ್ (22), ಸಂದೇಶ್ (22) ಹಾಗೂ ತೇಜಸ್ (22) ಸೇರಿ ಒಂಭತ್ತು ಮಂದಿ ಬಂಧಿತ ಆರೋಪಿಗಳು.

ವೈಷಮ್ಯದ ಹಿನ್ನೆಲೆಯಲ್ಲಿ‌ ಲೋಕೇಶ್ ನನ್ನು ಕೊಲೆ‌ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಕೊಲೆಯಾಗಿರುವ ಲೋಕೇಶ್ ಹೇಮಂತ್ ವಿರುದ್ಧ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಇದರಿಂದ ಇಬ್ಬರ ನಡುವೆ ದ್ವೇಷ ಬೆಳೆದಿತ್ತು.

ಇದೇ ಕಾರಣಕ್ಕೆ ಜನವರಿ ೨೨ರಂದು ಚಾಮರಾಜಪೇಟೆ ಆಜಾದ್ ನಗರದಲ್ಲಿ ಲೋಕೇಶ್ ಅವರ ಸಂಬಂಧಿಗಳ ಮನೆಯಲ್ಲಿದ್ದಾಗ ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದನ್ನು ಗಮನಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಃಆಗೂ ತಂಡ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com