ಕೊರೋನಾ ನಿರ್ವಹಣೆಯಲ್ಲಿ ಲೋಪ: ಎಚ್.ಕೆ ಪಾಟೀಲ್ ರಿಂದ ಅಧಿಕಾರಿಗಳಿಗೆ ತರಾಟೆ

ಕೊರೋನಾ ನಿರ್ಹಹಣೆ ತೀರಾ ಕಳಪೆಯಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್
Updated on

ಬೆಂಗಳೂರು: ಕೊರೋನಾ ನಿರ್ಹಹಣೆ ತೀರಾ ಕಳಪೆಯಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಪರೀಕ್ಷೆ, ಸೋಂಕಿತರಿಗೆ ಚಿಕಿತ್ಸೆ ಮತ್ತು ಸೋಂಕಿತರ ಪತ್ತೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. 25 ಸಾವಿರ ಜನರ ಪರೀಕ್ಷಾ ವರದಿ ಬಾಕಿ ಇದೆ ಎಂದರೆ ಏನರ್ಥ’ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಚಾರ ಆಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ ಎಂದು ಸಾರ್ವಜನಿಕ‌ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಹೇಳಿದ್ದಾರೆ. ಕೊರೊನಾ ಪರೀಕ್ಷೆಗಳ ಫಲಿತಾಂಶ ಬಾಕಿ ಇವೆ. ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇದೆ. ಈಗ ಹಾಸಿಗೆಗಳ ಅರೇಂಜ್ಮೆಂಟ್ ಮಾಡಲು ಹೊರಟಿದೆ ಸರ್ಕಾರ. ಆಸ್ಪತ್ರೆಗಳಲ್ಲೇ ಯಾಕೆ ಬೆಡ್ ಗಳ ವ್ಯವಸ್ಥೆ ಮಾಡ್ತಿಲ್ಲ ಸರ್ಕಾರ? ಕೊರೊನಾ ನಿರ್ವಹಣೆಯಲ್ಲಿ ಲೋಪ ಆಗಿದೆ'' ಎಂದು ಎಚ್ ಕೆ ಪಾಟೀಲ್ ಆರೋಪ ಮಾಡಿದ್ದಾರೆ.

''ಕೊವಿಡ್ ನಿಯಂತ್ರಣಕ್ಕೆ ಏನು ವ್ಯವಸ್ಥೆ ಮಾಡಬೇಕು, ಅದರಲ್ಲಿ ಸರ್ಕಾರದಿಂದ ಲೋಪ ಆಗಿದೆ. 15,000 ಕೊವಿಡ್ ಪರೀಕ್ಷಾ ರಿಸಲ್ಟ್ ಬರಲು ಬಾಕಿ ಇದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪರೀಕ್ಷಾ ವರದಿಯನ್ನು ನೀಡಲು ವಾರಗಟ್ಟೆಲೆ ತೆಗೆದುಕೊಳ್ಳಲಾಗಿದೆ. ಮೃತಪಟ್ಟವರ ಕೊವಿಡ್ ಟೆಸ್ಟಿಂಗ್ ವರದಿ ಬರದೆ ವಾರಗಟ್ಟೆಲೆ ಶವಾಗಾರದಲ್ಲಿ ಇಟ್ಟುಕೊಳ್ಳಲಾಗಿದೆ. ಅದು ಅತ್ಯಂತ ಆತಂಕಕಾರಿ ವಿಚಾರವಾಗಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊವಿಡ್ ನಿಂದ ಮೃತಪಟ್ಟವರನ್ನು ಜಾನುವಾರು ತರ ನೋಡಲಾಗುತ್ತಿದೆ. ಬಳ್ಳಾರಿಯಲ್ಲಿ ಮೃತರ ಶವಗಳನ್ನು ಕಸದ ರೀತಿ ಕನಿಷ್ಟ ಗೌರವ ನೀಡದೆ ಬಿಸಾಡಲಾಗಿದೆ. ಇದು ಅತ್ಯಂತ ಖಂಡನೀಯ‌ ವಿಚಾರವಾಗಿದೆ. ಸತ್ತವರನ್ನು ಹೂಳಲು ಜಾಗ ಸಿಗುತ್ತಿಲ್ಲ. ಆ ರೀತಿ ಮಾಡಬಾರದು'' ಎಂದು ಖಂಡಿಸಿದ್ದಾರೆ.

ಇನ್ನೂ ಕೊರೋನಾ ರೋಗಿಗಳಿಗೆ ಶೌಚಾಲಯದ ಬಗ್ಗೆ ಸಮಿತಿ ಪ್ರಶ್ನಿಸಿತು. ಈ ವೇಳೆ ಉತ್ತರಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿ ರೋಗಿಗೆ ಒಂದು ಶೌಚಾಲಯ ನೀಡಿದ್ದೇವೆ ಎಂದು ಹೇಳಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಸದಸ್ಯರು ನಿಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಹೇಗಿದೆ ಎಂದು ಪ್ರಶ್ನಿಸಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com