ಕೋವಿಡ್-19 ಸ್ಮಶಾನ ಭೂಮಿ ಗುರುತು ಮಾಡಲು ಸಮೀಕ್ಷೆ ಪ್ರಾರಂಭ

ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಬೆಂಗಳೂರಿನಿಂದ ಹೊರವಲಯದಲ್ಲಿ ಸರ್ಕಾರ 35.18 ಎಕರೆ ಪ್ರದೇಶವನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿದೆ. 
ಕೋವಿಡ್-19 ಸ್ಮಶಾನ ಭೂಮಿ ಗುರುತು ಮಾಡಲು ಸಮೀಕ್ಷೆ ಪ್ರಾರಂಭ
ಕೋವಿಡ್-19 ಸ್ಮಶಾನ ಭೂಮಿ ಗುರುತು ಮಾಡಲು ಸಮೀಕ್ಷೆ ಪ್ರಾರಂಭ

ಬೆಂಗಳೂರು: ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಬೆಂಗಳೂರಿನಿಂದ ಹೊರವಲಯದಲ್ಲಿ ಸರ್ಕಾರ 35.18 ಎಕರೆ ಪ್ರದೇಶವನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿದೆ. 

ನಗರದ ಒಳಭಾಗದಲ್ಲಿರುವ ಸ್ಮಶಾನಗಳಲ್ಲಿ ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಡೆಸಲು ವಿರೋಧ ವ್ಯಕ್ತವಾಗುತ್ತಿದ್ದು, ಅಂತ್ಯಕ್ರಿಯೆಗೆ ಜಾಗದ ಕೊರತೆ ಎದುರಾಗಿರುವುದರಿಂದ ಸರ್ಕಾರ ಹೊಸದಾಗಿ ಕೋವಿಡ್-19 ಸ್ಮಶಾನ ಭೂಮಿ ಗುರುತಿಸುವ ಕೆಲಸಕ್ಕೆ ಮುಂದಾಗಿದೆ. 

ಈ ಪೈಕಿ ದೀರ್ಘಾವಧಿಯಿಂದ ಯಲಹಂಕಾದಲ್ಲಿ ಹೊರವರ್ತುಲ ರಸ್ತೆಗಾಗಿ ರೂಪಿಸಲಾಗಿದ್ದ ಎರಡು ಎಕರೆ ಪ್ರದೇಶವನ್ನು ಕೈಬಿಡಲಾಗಿದೆ. 35.18 ಎಕರೆಯಷ್ಟು ಜಾಗವನ್ನು ಪಟ್ಟಿ ಮಾಡಿದ್ದ ಸರ್ಕಾರಿ ಆದೇಶ ಜು.02 ರಂದೇ ಹೊರಬಿದ್ದಿತ್ತು. ಆದರೆ ತಕ್ಷಣವೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಅಧಿಕೃತವಲ್ಲ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದೆ. 

ಸ್ಮಶಾನಕ್ಕಾಗಿ ಗುರುತು ಮಾಡಿರುವ ಪ್ರದೇಶಗಳು ಎಲ್ಲಿವೆ?

ಬೆಂಗಳೂರು ಉತ್ತರದಲ್ಲಿ 4 ಎಕರೆ, ಬೆಂಗಳೂರು ದಕ್ಷಿಣದಲ್ಲಿ 10 ಎಕರೆ, ಆನೇಕಲ್ ನಲ್ಲಿ 3 ಎಕರೆ, ಯಲಹಂಕಾದಲ್ಲಿ 12 ಎಕರೆಗಳನ್ನು ಗುರುತು ಮಾಡಲಾಗಿದೆ, ಬೆಂಗಳೂರು ಪೂರ್ವದಲ್ಲಿ ಯಾವುದೇ ಜಾಗವನ್ನೂ ಗುರುತು ಮಾಡಿಲ್ಲ. ಬೆಂಗಳೂರು ನಗರ ಪ್ರದೇಶದಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ನಡೆಸಲು ಜಾಗದ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ, ನಗರದ ಹೊರವಲಯದಲ್ಲಿ ಭೂಮಿ ಮಂಜೂರು ಮಾಡಲು ಬಿಬಿಎಂಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಬೆಂಗಳೂರು ನಗರದ ವಿಸ್ತರಣೆಗಾಗಿ, ವಾಣಿಜ್ಯ ಚಟುವಟಿಕೆಗಳಿಗಾಗಿ, ಕೈಗಾರೀಕರಣ ಹಾಗೂ ಟೌನ್ ಶಿಪ್ ನ ಅಭಿವೃದ್ಧಿಗಾಗಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗಗಳನ್ನು ಖಾಲಿ ಬಿಡಲಾಗಿತ್ತು. ಆದರೆ ಈಗ ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ಖಾಲಿ ಉಳಿದ ಪ್ರದೇಶಗಳನ್ನು ಸ್ಮಶಾನ ಭೂಮಿಗಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀರೂಪ ಇದರ ಬಗ್ಗೆ ಮಾಹಿತಿ ನೀಡಿದ್ದು, ಪಟ್ಟಿ ಮಾಡಲಾದ ಭೂಮಿಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭೂಮಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com