ಉಡುಪಿ: ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಲೆಕೋಡಿಗೆ ಹತ್ತಿರದ ಸೀತಾ ನದಿ ಕವಲು ಎಂಬಲ್ಲಿ ಶುಕ್ರವಾರ ನಡೆದಿದೆ.
ಉಡುಪಿ: ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
Updated on

ಉಡುಪಿ: ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಲೆಕೋಡಿಗೆ ಹತ್ತಿರದ ಸೀತಾ ನದಿ ಕವಲು ಎಂಬಲ್ಲಿ ಶುಕ್ರವಾರ ನಡೆದಿದೆ.

ಬಾರ್ಕೂರು ಹೊಸಾಳ ಗ್ರಾಮದ ಚೌಳಿಕೆರೆ ನಿವಾಸಿಗಳಾದ ಹರ್ಷ (25), ಕಾರ್ತಿಕ್ (21) ಮೃತ ದುರ್ದೈವಿಗಳು.

ಯುವಕರು ಗುರುವಾರ ರಾತ್ರಿ ನದಿಯಲ್ಲಿ ಮೀನಿಗೆ ಬಲೆ ಹರಡಿ ಹೋಗಿದ್ದರು. ಇಂದು ಬೆಳಿಗ್ಗೆ ಬಲೆ ಎತ್ತಿ, ಮೀನು ಸಂಗ್ರಹಿಸಲು ತೆರಳಿದ್ದಾರೆ. ನೀರಿಗೆ ಇಳಿದು ಬಲೆ ಎಳೆಯುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರು ಮೀನುಗಾರಿಕೆಗೆ ತೆರಳಿದ್ದ ವೇಳೆ ಇಬ್ಬರೂ ನೀರಲ್ಲಿ ಮುಳುಗಿರುವುದನ್ನು ಕಂಡು ಪೋಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. 

ಸಾವನ್ನಪ್ಪಿದ್ದ ಇಬ್ಬರೂ ಸಂಬಂಧಿಗಳಾಗಿದ್ದು ಹರ್ಷ ಸ್ಥಳೀಯ ಫೈನಾನ್ಸ್ ಕಂಪನಿಯೊಂದರಲ್ಲಿ ರಿಕವರಿ ಏಜೆಂಟ್ ಆಗಿದ್ದರೆ ಕಾರ್ತಿಕ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದನೆಂದು ಮೂಲಗಳೂ ಹೇಳಿದೆ.

ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಮೇಲೆತ್ತಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com