ಕಾಡಿನ ಮಕ್ಕಳ ಭಾಷೆಗೆ ಇಂಗ್ಲಿಷ್ ನಿಘಂಟು ತಯಾರು: ವಿದೇಶಿಗನ ದಶಕದ ಶ್ರಮಕ್ಕೊಂದು ಸಲಾಂ!

ಕಾಡಿನ ಬದುಕು ಅಧ್ಯಯನ ಮಾಡಲು ಬಂದು ಕಾಡಿನ ಮಕ್ಕಳ ಭಾಷೆಗೆ ಸೋತ ವಿದೇಶಿ ಸಂಶೋಧಕರೊಬ್ಬರು ಸೋಲಿಗ -ಇಂಗ್ಲಿಷ್ ನಿಘಂಟನ್ನೇ ತಯಾರಿಸಿದ್ದಾರೆ.
ಸೋಲಿಗ ನಿಘಂಟು ರಚಿಸಿದ ವಿದೇಶಿ ವ್ಯಕ್ತಿ
ಸೋಲಿಗ ನಿಘಂಟು ರಚಿಸಿದ ವಿದೇಶಿ ವ್ಯಕ್ತಿ
Updated on

ಚಾಮರಾಜನಗರ: ಕಾಡಿನ ಬದುಕು ಅಧ್ಯಯನ ಮಾಡಲು ಬಂದು ಕಾಡಿನ ಮಕ್ಕಳ ಭಾಷೆಗೆ ಸೋತ ವಿದೇಶಿ ಸಂಶೋಧಕರೊಬ್ಬರು ಸೋಲಿಗ -ಇಂಗ್ಲಿಷ್ ನಿಘಂಟನ್ನೇ ತಯಾರಿಸಿದ್ದಾರೆ.

ಸಾಮಾನ್ಯ ಕನ್ನಡಕ್ಕಿಂತ ವಿಭಿನ್ನವಾಗಿರುವ, ರಾಗ ಎಳೆದು ಮಾತನಾಡುವ ಮಲೆಸೋಲಿಗರ ಭಾಷೆಯನ್ನು ಮ್ಯಾನ್ಮಾರ್ ನ ಡಾ. ಅಂಗ್​ ಸಿ ಎಂಬವರು ಬರೋಬ್ಬರಿ 12 ವರ್ಷ ಪರಿಶ್ರಮದಿಂದ 1500 ಸಾವಿರ ಪದಗಳಿಗೆ ಇಂಗ್ಲಿಷ್ ಅರ್ಥಗಳು, ಚಿತ್ರಗಳು, ಬಟಾನಿಕಲ್ ಹೆಸರುಗಳನ್ನು ಸೇರಿಸಿ 450 ಪುಟಗಳ ನಿಘಂಟನ್ನು ತಯಾರಿಸಿದ್ದಾರೆ.

ಕಾಡಿನ ಮಕ್ಕಳ ಭಾಷೆಗೆ ಇಂಗ್ಲಿಷ್ ನಿಘಂಟು ತಯಾರಿಸಿದ ವಿದೇಶಿಗಆಸ್ಟ್ರೇಲಿಯಾ ವಿವಿಯಿಂದ ಪಿಹೆಚ್​ಡಿ ಪಡೆಯಲು ‘ಸೋಲಿಗರಲ್ಲಿನ ಸಾಂಪ್ರದಾಯಿಕ ಪರಿಸರ ಜ್ಞಾನ’ ಎಂಬ ವಿಷಯ ಆರಿಸಿಕೊಂಡ ಅಂಗ್ ಸಿ 2008 ರಿಂದ 2012 ರವರೆಗೆ 11 ತಿಂಗಳು ಬಿಳಿಗಿರಿರಂಗನ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಸೋಲಿಗರೊಂದಿಗೆ ಬೆರೆತಿದ್ದರು. 

ಅವರ ಪರಿಸರ ಜ್ಞಾನ, ಭಾಷೆ, ಜೀವನ ಶೈಲಿ ಅಭ್ಯಸಿಸಿ 2012 ರಲ್ಲಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ‌. ಈ ವೇಳೆ, ಸಾಂಪ್ರದಾಯಿಕ ಶಿಕ್ಷಣದಿಂದ ಮರೆಯಾಗುತ್ತಿದ್ದ ಮಲೆಸೋಲಿಗರ ಭಾಷೆಯನ್ನು ಉಳಿಸಬೇಕು. ಬೇರೆಯವರಿಗೂ ಇವರ ಭಾಷೆ ಅರ್ಥವಾಗಬೇಕು. ಮಕ್ಕಳು ಕಲಿಯಬೇಕೆಂದು ದಶಕಗಳಿಂದ ಫೋನ್ ಮೂಲಕ, ಇ-ಮೇಲ್ ಮೂಲಕ ಪದಗಳನ್ನು ಕಲೆಹಾಕಿ ನಿಘಂಟನ್ನು ಹೊರತಂದಿದ್ದಾರೆ‌. 

ಕಾಡಿನ ಮಕ್ಕಳ ಭಾಷೆಗೆ ಇಂಗ್ಲಿಷ್ ನಿಘಂಟು ತಯಾರುನಿಘಂಟಿನ ಡಿಸೈನ್​ನ್ನು ಕೂಡ ಆಂಗ ಸಿ ಅವರೇ ಮಾಡಿದ್ದು, ಸಂಪೂರ್ಣ ಕೃತಿ ಸ್ವಾಮ್ಯವನ್ನು ಸೋಲಿಗ ಸಂಘಕ್ಕೆ ನೀಡಿದ್ದಾರೆ. ‌ನಿಘಂಟನ್ನು ಮಾರಾಟ ಮಾಡಿ ಬರುವ ಲಾಭವನ್ನು ಸೋಲಿಗರ ಅಭಿವೃದ್ಧಿಗೆ ಬಳಸುವಂತೆ ಕೋರಿದ್ದು, ನಿಘಂಟಿನ ಇವತ್ತು 150 ಪ್ರತಿಗಳನ್ನು ಸಂಘಕ್ಕೆ ನೀಡಿದ್ದಾರೆ.

ವರದಿ: ಗುಳಿಪುರ ನಂದೀಶ
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com