ಜ್ಞಾನಭಾರತಿ ವಿವಿ ಅಗ್ನಿ ಶಾಮಕ ಠಾಣೆ ಐದು ಸಿಬ್ಬಂದಿಗೆ ಕೊರೋನಾ ಸೋಂಕು

ಜ್ಞಾನಭಾರತಿ ವಿಶ್ವ ವಿದ್ಯಾನಿಲಯದ ಅಗ್ನಿಶಾಮಕ ಠಾಣೆಯ ಐವರು ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಜ್ಞಾನಭಾರತಿ ವಿಶ್ವ ವಿದ್ಯಾನಿಲಯದ ಅಗ್ನಿಶಾಮಕ ಠಾಣೆಯ ಐವರು ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ,

ಏತನ್ಮಧ್ಯೆ, ಜ್ಞಾನ ಭಾರತಿಯ ಎಲ್ಲ ವಿಭಾಗಗಳು ಮತ್ತು ವಿಭಾಗಗಳ ಬೋಧಕೇತರ ಸಿಬ್ಬಂದಿಗೆ ಜುಲೈ 6-10 ರಿಂದ ಮನೆಯಿಂದ ಕೆಲಸ ಮಾಡುವಂತೆ ವಿಶ್ವವಿದ್ಯಾಲಯದ ಉಪಕುಲಪತಿ ಕೆ ಆರ್ ವೇಣುಗೋಪಾಲ್ ನಿರ್ದೇಶನ ನೀಡಿದ್ದಾರೆ.

ಜುಲೈ 11 ಮತ್ತು 12 ರಂದು ಸಾರ್ವಜನಿಕ ರಜಾದಿನಗಳಿರುವುದರಿಂದ ಜುಲೈ 13 ರಂದು ಅವರು ಕ್ಯಾಂಪಸ್‌ಗೆ ಮರಳಲಿದ್ದಾರೆ.  ಇನ್ನು ಸರ್ಕಾರದ ನಿರ್ದೇಶನದಂತೆ ಬೋಧಕೇತರ ಸಿಬ್ಬಂದಿಗೆ  ಜುಲೈ 15ರವರೆಗೆ ರಜೆ ಘೋಷಿಸಲಾಗಿದೆ.

ಬೋಧಕೇತರ ಸಿಬ್ಬಂದಿಗೂ ಸುತ್ತೋಲೆ ಹೊರಡಿಸಿ ರಜೆ ನೀಡಲಾಗಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಜೊತೆಗೆ ಜುಲೈ 15ರವರೆಗೂ ವಿವಿ ಬಂದ್ ಆಗಲಿದೆ.

ಏತನ್ಮಧ್ಯೆ, ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶನಿವಾರ ಆದೇಶ ಹೊರಡಿಸಿದ್ದು, ವಿಶ್ವವಿದ್ಯಾಲಯಗಳು / ಕಾಲೇಜುಗಳ ಮುಖ್ಯಸ್ಥರು ತಮ್ಮ ಬೋಧಕೇತರ ಸಿಬ್ಬಂದಿಯನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಕಚೇರಿಯಿಂದ ಕೆಲಸ ಮಾಡುವಂತೆ ಕೇಳಬಹುದು ಎಂದು ಸುತ್ತೋಲೆ ಹೊರಡಿಸಿದ್ದಾರೆ.

ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಕ್ಯಾಂಪಸ್‌ನಲ್ಲಿರುವ ಎರಡು ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ. ಆದರೆ ಕ್ಯಾಂಪಸ್ ಆವರಣದಲ್ಲಿ 200 ಹಾಸಿಗೆಗಳ ಸೌಲಭ್ಯವನ್ನು ಹೊಂದಿರುವ ಬಗ್ಗೆ ವೇಣುಗೋಪಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ನಾಲ್ಕು ವಿದ್ಯಾರ್ಥಿಗಳಿಗೆ ನೀಡಿದ್ದ ಒಂದು ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಒಂದು ಕೊಠಡಿಗೆ ಒಂದು ರೋಗಿ ನೀಡಲಾಗಿದೆ, ದೆಹಲಿ ಮಾದರಿಯಂತೆ ಸರ್ಕಾರ 1 ಸಾವಿರ ಬೆಡ್ ವ್ಯವಸ್ಥೆ ಮಾಡಬೇಕು ಎಂದು ಎಂದು ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com