ಲಾಕ್ ಡೌನ್ ನಂತರ ಆತ್ಮಹತ್ಯಾ ಪ್ರಕರಣಗಳು ರಾಜ್ಯದಲ್ಲಿ ಅತಿ ಹೆಚ್ಚು

ಕೋವಿಡ್-19 ನ್ನು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 
ಲಾಕ್ ಡೌನ್ ನಂತರ ಆತ್ಮಹತ್ಯಾ ಪ್ರಕರಣಗಳು ರಾಜ್ಯದಲ್ಲಿ ಅತಿ ಹೆಚ್ಚು
ಲಾಕ್ ಡೌನ್ ನಂತರ ಆತ್ಮಹತ್ಯಾ ಪ್ರಕರಣಗಳು ರಾಜ್ಯದಲ್ಲಿ ಅತಿ ಹೆಚ್ಚು
Updated on

ಬೆಂಗಳೂರು: ಕೋವಿಡ್-19 ನ್ನು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್ ಡೌನ್ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 

ಕೋವಿಡ್-19 ರಿಂದ ಉಂಟಾಗಿರುವ ಸಾಮಾಜಿಕ ಕಳಂಕ, ಭಯ, ಆತಂಕ, ಖಿನ್ನತೆಗಳಿಂದಾಗಿ ಹಲವಾರು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಲಾಕ್ ಡೌನ್ ತೆರವುಗೊಳಿಸಿದ ನಂತರ ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಶೇ.23 ಅಂದರೆ 1,127 ಹಾಗೂ ಜೂನ್ ತಿಂಗಳಲ್ಲಿ ಶೇ.18 ರಷ್ಟು ಅಂದರೆ 1,084 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆಗಳ ಸಂಖ್ಯೆ 477 ಇತ್ತು. 

ಡಬ್ಲ್ಯೂ ಹೆಚ್ ಒ ದ ಪ್ರಾದೇಶಿಕ ನಿರ್ದೇಶಕ, ಡಾ.ಪೂನಮ್ ಖೇತ್ರಪಾಲ್ ಸಿಂಗ್ ಈ ಬಗ್ಗೆ ಮಾತನಾಡಿದ್ದು ಕೋವಿಡ್-19 ಸೋಂಕು ಹಲವರನ್ನು ಏಕಾಂಗಿಯ ಭಾವನೆ, ಖಿನ್ನತೆಗೆ ದೂಡುತ್ತದೆ. ಮತ್ತು ಕೋವಿಡ್-19 ರ ನಡುವೆಯೇ ಆತ್ಮಹತ್ಯೆಗಳಿಗೆ ಮತ್ತೊಂದು ಕಾರಣವೆಂದರೆ ಅದು ಮನೆಯಲ್ಲೇ ಉಂಟಾಗುವ ಕಿರುಕುಳ, ಹಿಂಸೆಯಾಗಿದೆ,  ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಎಂದಿದ್ದಾರೆ.

"ಜೀವ ಹಾಗೂ ಜೀವನ ಎರಡಕ್ಕೂ ಸಹ ಕೋವಿಡ್-19 ಮಾರಕವಾಗಿ ಪರಿಣಮಿಸಿದ್ದು, ಈಗಿರುವ ಮಾನಸಿಕ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ" ಎಂದು ಖೇತ್ರಪಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಮಾನಸಿಕ ಸಮಸ್ಯೆಗಳನ್ನು ಪ್ರಾರಂಭಿಕ ಹಂತಗಳಲ್ಲಿಯೇ ಪತ್ತೆ ಮಾಡುವುದು ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. 
ಜಾಗತಿಕವಾಗಿ ವರ್ಷದಲ್ಲಿ 8,00,000  ಆತ್ಮಹತ್ಯೆಗಳಾಗುತ್ತವೆ. 15-29 ವರ್ಷದವರೇ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುತದೆ ಅಂಕಿ-ಅಂಶ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com