ಯಾದಗಿರಿ: ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ನಿಧನ

ಯಾದಗಿರಿ ಜಿಲ್ಲೆಯ ಸಗರನಾಡಿನ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ( 86) ಅವರು ಭಾನುವಾರ ನಿಧನರಾಗಿದ್ದಾರೆ.
ಎ ಕೃಷ್ಣ
ಎ ಕೃಷ್ಣ
Updated on: 

ಯಾದಗಿರಿ: ಯಾದಗಿರಿ ಜಿಲ್ಲೆಯ ಸಗರನಾಡಿನ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ( 86) ಅವರು ಭಾನುವಾರ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಪುರದ ತಾಲೂಕಾಸ್ಪತ್ರೆಗೆ ಕರೆ ತರುವುದರೊಳಗೆ ಮಾರ್ಗಮಧ್ಯೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ನೇಳನದ ಸರ್ವಾದ್ಯಕ್ಷರಾಗಿದ್ದ ಕೃಷ್ಣ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡಗೆ ನೀಡಿದ್ದಾರೆ. ಕೃಷ್ಣ ಅವರ ನಿಧನದಿಂದ ನಾಡಿನ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.

ಷಟ್ಪದಿ, ರಗಳೆ, ಕಂದಪದ್ಯ, ಚಂಪೂ ಕಾವ್ಯ, ಹೀಗೆ ಅನೇಕ ಪ್ರಕಾರಗಳಲ್ಲಿ ಕೃಷ್ಣ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ.

ಎದೆಗಡಲ ಮುತ್ತುಗಳು, ಗೀತಾಂಜಲಿ, ಕರುಣ ಕಿರೀಟ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದ್ರಲಾಂಬ, ಅಣುಪುರಾಣ, ಮುಂತಾದ ಗ್ರಂಥಗಳನ್ನು ಎ.ಕೃಷ್ಣ ಸುರಪುರ ಅವರು ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com