ಆನ್‌ಲೈನ್ ತರಗತಿ ಮರೆತುಬಿಡಿ: ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಶಿಕ್ಷಕರು!

ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಶಿಕ್ಷಣವನ್ನು  ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಹೊಸ ಪ್ರಯತ್ನವನ್ನು ಪ್ರಾರಂಭಿಸಿವೆ. ಕಮಲಾಪುರ ತಾಲೂಕಿನ ನೀಲಾಖೇಡ್, ಪಾಟವಾಡ್, ಕಾಟೊಲಿ ಮತ್ತು ಒಕಾಲಿ ಗ್ರಾಮದ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮನೆ ಬಾಗಿಲಿನಲ್ಲಿ ಕಲಿಯುವ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕಿ
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕಿ

ಕಲಬುರಗಿ: ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಶಿಕ್ಷಣವನ್ನು  ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಹೊಸ ಪ್ರಯತ್ನವನ್ನು ಪ್ರಾರಂಭಿಸಿವೆ. ಕಮಲಾಪುರ ತಾಲೂಕಿನ ನೀಲಾಖೇಡ್, ಪಾಟವಾಡ್, ಕಾಟೊಲಿ ಮತ್ತು ಒಕಾಲಿ ಗ್ರಾಮದ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮನೆ ಬಾಗಿಲಿನಲ್ಲಿ ಕಲಿಯುವ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದ್ದಾರೆ.

ಸೋಮವಾರ ನೀಲಾಖೇಡ ಹಳ್ಳಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತೆರಳಿದಾಗ, ವಿದ್ಯಾರ್ಥಿಗಳ ಮನೆ ಬಾಗಿಲಿನಲ್ಲಿ ಶಿಕ್ಷಕರು ಶಿಕ್ಷಣ ನೀಡುತ್ತಿರುವುದು ಕಂಡುಬಂದಿತು. ಸುಮಾರು 45 ವಿದ್ಯಾರ್ಥಿಗಳ ಮನೆಯೊಂದರ ಮುಂಭಾಗ ಇರುವ ಮರದ ಕೆಳಗೆ  ಕುಳಿತು ವಿದ್ಯಾರ್ಥಿಗಳು ಹೇಳುವುದನ್ನು ಕೇಳುತ್ತಿದ್ದರು. ಕಂಟೈನ್ ಮೆಂಟ್ ವಲಯ ಎಂದು ಕಳೆದ ವಾರ ಘೋಷಣೆಯಾದ ನಂತರ ಈ ತರಗತಿಗಳು ಆರಂಭವಾಗಿವೆ.

ಇಂಗ್ಲೀಷ್ ವಿಷಯ ಬೋಧಿಸುತ್ತಿದ್ದ ನೀಲಾಖೇಡ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿ ರೇಣುಕಾ ಮಾತನಾಡಿ, ಶಾಲೆಗಳ ಪುನರ್  ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಹುಡುಕುವಂತೆ ಕೆಲ ಗ್ರಾಮಸ್ಥರು ಹಾಗೂ ಎಸ್ ಡಿಎಂಸಿ ಮುಖ್ಯಸ್ಥ ಸೂರ್ಯಕಾಂತ್  ಜಮಾದಾರ್ ಕೇಳಿಕೊಂಡರು. ನಂತರ ಶಾಲೆಯ ಸಿಬ್ಬಂದಿ ಹಾಗೂ ಜಮಾದಾರ್ ಸಭೆ ನಡೆಸಿ ವಿದ್ಯಾರ್ಥಿಗಳ ಮನೆ ಬಾಗಿಲಿನಲ್ಲಿಯೇ ತರಗತಿ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ಕೋವಿಡ್-19 ಭಯವಿಲ್ಲದೆ ಕಲಿಯುವಂತಾಗಿದೆ ಎಂದು ತಿಳಿಸಿದರು.

ಪ್ರತಿದಿನ ಎರಡದಿಂದ ಮೂರು ಕಡೆಗಳಲ್ಲಿ ಎರಡು ಗಂಟೆಯ ತರಗತಿಗಳನ್ನು ಶಿಕ್ಷಕರು ತೆಗೆದುಕೊಳ್ಳುತ್ತಾರೆ. ಕನ್ನಡ, ಇಂಗ್ಲೀಷ್ , 
ವಿಜ್ಞಾನ ಮತ್ತು ಗಣಿತವನ್ನು ಬೋಧಿಸಲಾಗುತ್ತದೆ. ಒಟ್ಟಾರೇ 90 ವಿದ್ಯಾರ್ಥಿಗಳ ಪೈಕಿ 40ರಿಂದ 50 ವಿದ್ಯಾರ್ಥಿಗಳು ತರಗತಿಗೆ
ಪಾಲ್ಗೊಳ್ಳುತ್ತಾರೆ ಎಂದು ರೇಣುಕಾ ಹೇಳಿದರು.

ಶಿಕ್ಷಕರು ತರಗತಿ ಆರಂಭಿಸಿರುವುದಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದರು. ನೀಲಾಖೇಡ್ ಗ್ರಾಮದಲ್ಲಿ ಶ್ರೀಕಂಠಯ್ಯ, ರವಿ, ಕವಿತಾ, ಶಿವಲೀಲಾ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕಮಲಾಪುರ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳ ಶಿಕ್ಷಕರು ಸ್ವಯಂ ಸೇವೆಯಿಂದ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಇತರ ಗ್ರಾಮಗಳ ಶಿಕ್ಷಕರು ಮುಂದೆ ಬಂದರೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಬಿಇಒ ಬನ್ನಿಕಟ್ಟಿ ಹೇಳಿದರು.

ಎಲ್ಲಾ ಸರ್ಕಾರಿ ಶಾಲೆಗಳು ಕಮಲಾಪುರ ಮಾದರಿ ಅನುಸರಿಸುವಂತೆ ಒತ್ತಾಯಿಸುವುದಿಲ್ಲ, ಒಂದು ವೇಳೆ ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಡಿಡಿಪಿಐ ಎಸ್ ಪಿ ಬಡಗುಡಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com