ಮೈಸೂರು: ಲಾಕ್ ಡೌನ್ ಅವಧಿಯಲ್ಲಿ ಚಾಮುಂಡಿ ದೇವಸ್ಥಾನಕ್ಕೆ 8 ಕೋಟಿ ರೂ. ಆದಾಯ ನಷ್ಟ!

ನಗರದ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ 8,36,15,574 ರೂ. ಆದಾಯ ನಷ್ಟವಾಗಿದೆ.
ಚಾಮುಂಡಿ ದೇವಸ್ಥಾನ
ಚಾಮುಂಡಿ ದೇವಸ್ಥಾನ

ಮೈಸೂರು: ನಗರದ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ 8,36,15,574 ರೂ. ಆದಾಯ ನಷ್ಟವಾಗಿದೆ.

ಈ ವರ್ಷದ ಜುಲೈನ ಆಶಾಡ ಶುಕ್ರವಾರದ ಸಂಗ್ರಹವನ್ನು ಇನ್ನೂ ಎಣಿಸಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದರಿಂದ ಭಾನುವಾರ ಬೆರಳೆಣಿಕೆಯಷ್ಟು ಭಕ್ತರು ಮತ್ತು ವಿಐಪಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಂಗ್ರಹ ಕಡಿಮೆಯಾಗಿರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಮಾರ್ಚ್ ತಿಂಗಳಲ್ಲಿ ನಗರದಲ್ಲಿ ಸಾಂಕ್ರಾಮಿಕ ರೋಗ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಮಾರ್ಚ್ ಅಂತ್ಯದಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಲಾಗಿತ್ತು. ಲಾಕ್‌ಡೌನ್ ಸಡಿಲಿಸಿದ ನಂತರವೂ ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.  ನಂತರ ಉಳಿದ ದೇವಾಲಯಗಳೊಂದಿಗೆ ಚಾಮುಂಡೇಶ್ವರಿ ದೇವಾಲಯವೂ ಜೂನ್ 8 ರಂದು ತೆರೆದಿತ್ತು.

ಈ ವರ್ಷ, ಏಪ್ರಿಲ್ ತಿಂಗಳಲ್ಲಿ 1,75,841 ರೂ. ಮೇ ತಿಂಗಳಲ್ಲಿ 9,08,433 ರೂ. ಮತ್ತು ಜೂನ್‌ನಲ್ಲಿ 9,15,465 ರೂ ಸೇರಿದಂತೆ ಒಟ್ಟು 19,99,739 ರೂ. ಸಂಗ್ರಹಿಸಲಾಗಿದೆ. ಆದಾಯದಲ್ಲಿ ಆನ್‌ಲೈನ್ ಸೇವೆಗಳಿಂದ ಬಂದಿರುವ ಹಣ, ಮನಿ ಆರ್ಡರ್‍ಗಳು ಮತ್ತು ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com