ಕೋವಿಡ್-19: ರಾಜ್ಯದ ಆಸ್ಪತ್ರೆಗಳ ಐಸಿಯುಗಳಲ್ಲಿ ವಿಶೇಷ ತಜ್ಞರ ಕೊರತೆ!

ಕರ್ನಾಟಕದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ(ಐಸಿಯು) ಕೊರತೆಯಿದ್ದು ಅಲ್ಲಿ ಕೆಲಸ ಮಾಡುವ ನುರಿತ ವೈದ್ಯರ ತಂಡಕ್ಕೆ ಸಹ ಕೊರತೆಯಿದೆ ಎಂದು ತಜ್ಞರ ಮೂಲಕ ತಿಳಿದುಬಂದಿದೆ.
ಕೋವಿಡ್-19 ಕೇಂದ್ರವೊಂದರಲ್ಲಿ ಕೆಲಸದ ಮಧ್ಯೆ ವಿಶ್ರಾಂತಿ ತೆಗೆದುಕೊಂಡ ಆರೋಗ್ಯ ಸೇವಾ ಕಾರ್ಯಕರ್ತ
ಕೋವಿಡ್-19 ಕೇಂದ್ರವೊಂದರಲ್ಲಿ ಕೆಲಸದ ಮಧ್ಯೆ ವಿಶ್ರಾಂತಿ ತೆಗೆದುಕೊಂಡ ಆರೋಗ್ಯ ಸೇವಾ ಕಾರ್ಯಕರ್ತ

ಬೆಂಗಳೂರು: ಕರ್ನಾಟಕದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ(ಐಸಿಯು) ಕೊರತೆಯಿದ್ದು ಅಲ್ಲಿ ಕೆಲಸ ಮಾಡುವ ನುರಿತ ವೈದ್ಯರ ತಂಡಕ್ಕೆ ಸಹ ಕೊರತೆಯಿದೆ ಎಂದು ತಜ್ಞರ ಮೂಲಕ ತಿಳಿದುಬಂದಿದೆ.

ತಜ್ಞರ ಅಂದಾಜು ಪ್ರಕಾರ ಕರ್ನಾಟಕದಲ್ಲಿ ಸುಮಾರು ಸಾವಿರ ಮತ್ತು ದೇಶದಲ್ಲಿ ಸುಮಾರು 15 ಸಾವಿರ ಐಸಿಯುಗಳಿವೆ. ಪ್ರಸ್ತುತ ಇರುವ ಐಸಿಯುಗಳಲ್ಲಿ ಬಹುತೇಕ ಕೋವಿಡ್-19 ರೋಗಿಗಳಿದ್ದು ನುರಿತ ವೈದ್ಯರ ಕೊರತೆಯಿಂದಾಗಿ ಅನಸ್ತೇಷಿಯಾ ವಿಶೇಷ ತಜ್ಞರು(ಅರಿವಳಿಕೆ ತಜ್ಞರು) ನಿರ್ವಹಿಸುತ್ತಿದ್ದಾರೆ.

ಕೋವಿಡ್-19 ರೋಗಿಗಳಲ್ಲಿ ಶ್ವಾಸಕೋಶದ ಸೋಂಕು ಮತ್ತು ಗಾಯದ ಸಮಸ್ಯೆ ಕಂಡುಬರುತ್ತದೆ. ಅವರಿಗೆ ವೆಂಟಿಲೇಟರ್ ಗಳ ಅಗತ್ಯವಿರುತ್ತದೆ. ಇಂತವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ನುರಿತ ತಜ್ಞರು ಬೇಕಾಗುತ್ತದೆ. ಬೆಂಗಳೂರಿನ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ತೀವ್ರ ನಿಗಾ ಘಟಕವಿಲ್ಲ. ಭಾರತೀಯ ಮೆಡಿಕಲ್ ಕೌನ್ಸಿಲ್ ಅದನ್ನು ಕಡ್ಡಾಯ ಮಾಡಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ಡಾ ಟಿ ಆರ್ ಚಂದ್ರಶೇಖರ್ ಹೇಳುತ್ತಾರೆ.

ಬೆಂಗಳೂರು ಮೆಡಿಕಲ್ ಕಾಲೇಜಿನಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕ ತೀವ್ರ ನಿಗಾ ಘಟಕವಿಲ್ಲ, ಐಸಿಯುವನ್ನು ಸರ್ಜಿಕಲ್ ಅಥವಾ ಅನಸ್ತೇಷಿಯಾ ವಿಭಾಗಗಳೇ ನಿರ್ವಹಿಸುತ್ತಿವೆ. ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡುವ ಅಲ್ಲಿನ ವೈದ್ಯರೇ ಐಸಿಯು ಕರ್ತವ್ಯವನ್ನು ನಿರ್ವಹಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com