ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಅನುಚಿತ ವರ್ತನೆ; ಯುವತಿಯಿಂದಲೇ ಕಾಮುಕ ಯುವಕನಿಗೆ ಬಸ್‌ನಲ್ಲೇ ಬಿತ್ತು ಗೂಸ

ಅನುಚಿತ ವರ್ತನೆ ತೋರಿದ ಕಾಮುಕ ಯುವಕನೋರ್ವನಿಗೆ ಬಸ್ಸಿನಲ್ಲೇ ಯುವತಿ ಹಿಗ್ಗಾಮುಗ್ಗ ಗೂಸಾ ನೀಡಿದ ಪ್ರಸಂಗ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಂಡ್ಯ: ಅನುಚಿತ ವರ್ತನೆ ತೋರಿದ ಕಾಮುಕ ಯುವಕನೋರ್ವನಿಗೆ ಬಸ್ಸಿನಲ್ಲೇ ಯುವತಿ ಹಿಗ್ಗಾಮುಗ್ಗ ಗೂಸಾ ನೀಡಿದ ಪ್ರಸಂಗ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಂಡ್ಯದಿಂದ ಪಾಂಡವಪುರಕ್ಕೆ ಹೊರಡಬೇಕಿದ್ದ ಬಸ್‌ನ ಮುಂದಿನ ಸೀಟಿನಲ್ಲಿ ಕೂತಿದ್ದ ಯುವತಿ ಜೊತೆ ಕಾಮುಕನೋರ್ವ ಕೂಡ ಕುಳಿತಿದ್ದ, ಈ ವೇಳೆ ಯುವತಿಗೆ ಮೈ, ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುವ ಯತ್ನ ಮಾಡುತ್ತಿದ್ದಾನೆ. ಇದು ಅತಿಯಾಗುತ್ತಿದ್ದುದನ್ನು ಅರಿತ ಯುವತಿ ಬಸ್ಸಿನಲ್ಲೇ ಯುವಕನನ್ನ ಹಿಡಿದು ಮನಬಂದಂತೆ ಗೂಸಾ ಕೊಟ್ಟಿದ್ದಾಳೆ.

ಯುವತಿಯಿಂದ ಏಟು ತಿಂದ ಕಾಮುಕ ಬಸ್ಸಿಳಿದು ಓಡಿ ಹೋಗಿದ್ದಾನೆ. ಕೊರೋನಾ ಕಾರಣದಿಂದ ಪರಾರಿಯಾದವನ ಹಿಡಿಯಲು ಸಾರ್ವಜನಿಕರು ಹಿಂದೇಟು ಹಾಕಿದ್ದಲ್ಲದೆ ನೊಂದ ಯುವತಿ ಸಹಾಯಕ್ಕೆ ಬಾರದೆ ಮೌನ ವರ್ತನೆ ತೋರಿದರು.

ಯುವತಿ ಕಾಮುಕನಿಗೆ ಥಳಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಆದರೆ ಕಾಮುಕನಿಂದ ಕಿರುಕುಳ ಅನುಭವಿಸಿದ ಯುವತಿಯೂ ಸಹ ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ.
-ನಾಗಯ್ಯ

Related Stories

No stories found.

Advertisement

X
Kannada Prabha
www.kannadaprabha.com