ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ನಿರಾಕರಣೆ: 80 ವರ್ಷದ ವೃದ್ಧ ಸಾವು

ಕೋವಿಡ್-19 ಬಂದ ಮೇಲೆ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು, ಅಲ್ಲಿನ ವೈದ್ಯರು ಅಮಾನುಷವಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು, ವರದಿಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆ. ಅದಕ್ಕೆ ಈ ಪ್ರಕರಣ ಸೇರ್ಪಡೆ.
ವೃದ್ಧ ವೆಂಕಟಸ್ವಾಮಿ(ಸಂಗ್ರಹ ಚಿತ್ರ)
ವೃದ್ಧ ವೆಂಕಟಸ್ವಾಮಿ(ಸಂಗ್ರಹ ಚಿತ್ರ)

ಬೆಂಗಳೂರು: ಕೋವಿಡ್-19 ಬಂದ ಮೇಲೆ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು, ಅಲ್ಲಿನ ವೈದ್ಯರು ಅಮಾನುಷವಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು, ವರದಿಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆ. ಅದಕ್ಕೆ ಈ ಪ್ರಕರಣ ಸೇರ್ಪಡೆ.

80 ವರ್ಷದ ವೃದ್ಧ ವೆಂಕಟಸ್ವಾಮಿ ಹೃದ್ರೋಗದಿಂದ ಬಳಲುತ್ತಿದ್ದವರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ತುರ್ತು ವಿಭಾಗದಲ್ಲಿ ಚಿಕಿತ್ಸೆಗೆ ನಿರಾಕರಿಸಲಾಯಿತು. ಅದೇ ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಏನಾಯಿತು ಎಂದು ಅವರ ಸೊಸೆ ಸ್ಮಿತಾ ಶ್ರೀಹರಿ ವಿವರಿಸುತ್ತಾರೆ.

''ನನ್ನ ಪತಿ, ನಮ್ಮ ಖಾಸಗಿ ವೈದ್ಯರು ಮತ್ತು ನಮ್ಮ ಅತ್ತೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ನೋಡಿದಾಗ ಮಾವನವರು ಅರೆಪ್ರಜ್ಞೆಯಿಂದ ಕೋಣೆಯಲ್ಲಿ ಬಿದ್ದು ಹೋಗಿದ್ದರು. ಅವರ ಹೃದಯ ಬಡಿತ ಮತ್ತು ಬಿ ಪಿ ಇಳಿದು ಹೋಗಿತ್ತು. ಕಾಲುಗಳೆರಡೂ ಊದಿಕೊಂಡಿದ್ದವು. ಆಸ್ಪತ್ರೆಯಲ್ಲಿ ಅವರಿಗೆ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು, ಎಲ್ಲಾ ಬೆಡ್ ಗಳು ಕೋವಿಡ್ ರೋಗಿಗಳಿಂದ ತುಂಬಿ ಹೋಗಿದೆ ಎಂದು ಅಲ್ಲಿನ ಆಡಳಿತ ಮಂಡಳಿ ಸಿಬ್ಬಂದಿ ಹೇಳಿದರು. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯೋಣ, ಅಲ್ಲಿಯವರೆಗೆ ತುರ್ತು ವಿಭಾಗದಲ್ಲಿ ಜೀವ ರಕ್ಷಕದೊಂದಿಗೆ ಇಡಿ ಎಂದು ನನ್ನ ಪತಿ ಬೇಡಿಕೊಂಡರು''.

ನಂತರ ಸಾಧ್ಯವಾದ ಎಲ್ಲಾ ಆಸ್ಪತ್ರೆಗಳನ್ನು ವಿಚಾರಿಸಿದಾಗ ಎಲ್ಲಿಯೂ ಸಿಗಲಿಲ್ಲ, ಮೊದಲು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎನ್ನುತ್ತಿದ್ದರು. ವೀಲ್ ಚೇರ್ ನಲ್ಲಿ ಹೊರಗೆ ಕೂರಿಸಿ, ಡ್ರಿಪ್ ಕೊಡುತ್ತೇವೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರು ಹೇಳಿದರು. ತುರ್ತು ಘಟಕದ ಹೊರಗೆ ಎರಡು ಗಂಟೆ ಕಾದ ಮೇಲೆ ಮಾವನವರು ಕುಸಿದು ಬಿದ್ದರು. ನಂತರ ವೈದ್ಯರು ಒಳಗೆ ಕರೆದುಕೊಂಡು ಹೋಗಿ ವೆಂಟಿಲೇಟರ್ ನಲ್ಲಿ ಇರಿಸಿದರು. ಒಳಗೆ ನಮ್ಮ ಪತಿ ಹೋಗಿ ನೋಡಿದರೆ ತುರ್ತು ಘಟಕದ ಒಂದು ಬೆಡ್ ಮಾತ್ರ ತುಂಬಿ ಏಳು ಬೆಡ್ ಗಳು ಖಾಲಿಯಿದ್ದವು.ವೈದ್ಯರು ನಮ್ಮ ಮಾವನವರ ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿ ಕೂಡ ಕರುಣೆ ತೋರಲಿಲ್ಲ'' ಎಂದು ಸ್ಮಿತಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ನಂತರ ಅವೇಕ್ಷ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತು. ಆದರೆ ಮಾವನವರು ಅರೆಪ್ರಜ್ಞೆಯಲ್ಲಿದ್ದು, ಅವರಿಗೆ ಹೃದಯ ಕಾಯಿಲೆ ಇದ್ದುದರಿಂದ ಐಸಿಯುನಲ್ಲಿ ತೀರಿಹೋದರು. ಕೊಲಂಬಿಯಾ ಏಷಿಯಾ ಆಸ್ಪತ್ರೆ ಅವರನ್ನು ದಾಖಲು ಮಾಡಿಕೊಳ್ಳುತ್ತಿದ್ದರೆ ಬದುಕುಳಿಯುತ್ತಿದ್ದರೇನೊ ಎಂದು ಸ್ಮಿತಾ ಫೇಸ್ ಬುಕ್ ನಲ್ಲಿ ದುಃಖ ತೋಡಿಕೊಂಡಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯನ್ನು ಸಂಪರ್ಕಿಸಿದಾಗ, ಹೆಬ್ಬಾಳದ ತಮ್ಮ ಆಸ್ಪತ್ರೆಗೆ ಖಾಸಗಿ ವೈದ್ಯರೊಬ್ಬರಿಂದ ಜುಲೈ 23ಕ್ಕೆ ಫೋನ್ ಬಂತು. ಉಸಿರಾಟದ ಸಮಸ್ಯೆಯಿರುವ ಹಿರಿಯ ವೃದ್ಧ ರೋಗಿಯನ್ನು ಕಳುಹಿಸಬೇಕು ಎಂದು ಕೇಳಿದರು. ವಾರ್ಡ್ ಬೆಡ್ ಲಭ್ಯವಿದೆ, ಐಸಿಯು ಬೆಡ್ ಖಾಲಿಯಿಲ್ಲ ಎಂದು ಹೇಳಿದೆವು. ಮಹಿಳೆ ವಿಚಾರಿಸಿದ್ದ ಸಂದರ್ಭದಲ್ಲಿ ವೃದ್ಧರ ಆರೋಗ್ಯ ಸ್ಥಿರವಾಗಿತ್ತು, ಐಸಿಯು ಬೇಕಾಗಿರಲಿಲ್ಲ, ರೋಗಿಯನ್ನು ಕಳುಹಿಸಿ ಎಂದೆವು.

ರೋಗಿ ಬಂದ ಮೇಲೆ ಪರೀಕ್ಷೆ ಮಾಡಿದಾಗ ಗಂಭೀರ ಸ್ಥಿತಿಯಲ್ಲಿದ್ದಾರೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಯಿತು. ಆಗ ಅವರ ಕುಟುಂಬಸ್ಥರೇ ಇಲ್ಲ, ಅವರಿಗೆ ಐಸಿಯು ಚಿಕಿತ್ಸೆ ಅಗತ್ಯವಿಲ್ಲ ಎಂದು ಬೇರೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋದರು, ಕುಟುಂಬಸ್ಥರೇ ನಮ್ಮ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲು ನಿರಾಕರಿಸಿದರು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com