ರಾಜ್ಯದಲ್ಲಿ ಚಿಪ್ ತಯಾರಿಕಾ ಘಟಕ ಆರಂಭಿಸುವಂತೆ ಇಂಟೆಲ್ ಗೆ ರಾಜ್ಯ ಸರ್ಕಾರ ಆಹ್ವಾನ
ರಾಜ್ಯದಲ್ಲಿ ಚಿಪ್ ತಯಾರಿಕಾ ಘಟಕ ಆರಂಭಿಸುವಂತೆ ಇಂಟೆಲ್ ಗೆ ರಾಜ್ಯ ಸರ್ಕಾರ ಆಹ್ವಾನ

ರಾಜ್ಯದಲ್ಲಿ ಚಿಪ್ ತಯಾರಿಕಾ ಘಟಕ ಆರಂಭಿಸುವಂತೆ ಇಂಟೆಲ್ ಗೆ ರಾಜ್ಯ ಸರ್ಕಾರ ಆಹ್ವಾನ

ಸೆಮಿ ಕಂಡಕ್ಟರ್ ದೈತ್ಯ ಇಂಟೆಲ್ ಸಂಸ್ಥೆ ರಾಜ್ಯದಲ್ಲಿ ತನ್ನ ತಯಾರಿಕ ಘಟಕ ಸ್ಥಾಪಿಸಬೇಕೆಂದು ಐಟಿ –ಬಿಟಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಬುಧವಾರ ಆಹ್ವಾನಿಸಿದ್ದಾರೆ.

ಬೆಂಗಳೂರು: ಸೆಮಿ ಕಂಡಕ್ಟರ್ ದೈತ್ಯ ಇಂಟೆಲ್ ಸಂಸ್ಥೆ ರಾಜ್ಯದಲ್ಲಿ ತನ್ನ ತಯಾರಿಕ ಘಟಕ ಸ್ಥಾಪಿಸಬೇಕೆಂದು ಐಟಿ –ಬಿಟಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಬುಧವಾರ ಆಹ್ವಾನಿಸಿದ್ದಾರೆ.

ಇಂಟೆಲ್ ಇಂಡಿಯಾದ ಭಾರತೀಯ ಮುಖ್ಯಸ್ಥ ನಿವೃತಿ ರಾಯ್ ಹಾಗೂ ಸಂಸ್ಥೆಯ ಇತರ ಉನ್ನತ ಅಧಿಕಾರಿಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ವೇಳೆ ಮಂಗಳೂರು ಅಥವಾ ಬೆಳಗಾವಿಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡಲಿದೆ ಎಂದು ಡಾ. ಅಶ್ವಥ್ ನಾರಾಯಣ ಭರವಸೆ ನೀಡಿದರು. ಕರ್ನಾಟಕದಲ್ಲಿ ತಯಾರಿಸಲಾಗುವ ಸೆಮಿ ಕಂಡಕ್ಟರ್ ಗಳನ್ನು ಸಮುದ್ರ ಮಾರ್ಗದ ಮೂಲಕ ರಪ್ತು ಮಾಡಲು ಮಂಗಳೂರಿನಲ್ಲಿ ಬಂದರು ಸೌಲಭ್ಯವಿದೆ. ಬೆಳಗಾವಿಯಿಂದ ಕೆಲವೇ ಗಂಟೆಗಳಲ್ಲಿ ಗೋವಾ ಬಂದರು ತಲುಪಬಹುದಾಗಿದೆ ಉಪಮುಖ್ಯಮಂತ್ರಿ ವಿವರಿಸಿದ್ದಾರೆ.

ರಾಜ್ಯದಲ್ಲಿ ಇಂಟೆಲ್ ತನ್ನ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಂದಾದರೆ ಸುಗಮ ವಹಿವಾಟು ಖಾತರಿಪಡಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ಕಲ್ಪಿಸಲಿದೆ ಎಂದು ಉಪ ಮುಖ್ಯಮಂತ್ರಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಇಂಟೆಲ್ ಭಾರತ ಮುಖ್ಯಸ್ಥರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ಪರಿಹಾರ ಪ್ರಕಟಿಸಿ, ಕೋವಿಡ್ -19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು.

ಇಂಟೆಲ್ ಉದ್ಯಮ ಕಾರ್ಯಾಚರಣೆಯ ನಿರ್ದೇಶಕ ಮಾನಸ್ ದಾಸ್ 1 ಕೋಟಿ ರೂಪಾಯಿ ಪರಿಹಾರದ ಚೆಕ್ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರಿಗೆ ಹಸ್ತಾಂತರಿಸಿದರು. ಇಂಟೆಲ್ ಇಂಡಿಯಾದ ಉನ್ನತ ಅಧಿಕಾರಿಗಳಾದ ಅನಂತ ನಾರಾಯಣ್, ಜಿತೇಂದ್ರ ಚೆಡ್ಡಾ, ಆನಂದ್ ದೇಶಪಾಂಡೆ, ಅಂಜಲಿ ರಾವ್ ವರ್ಟಿಕಲ್ ಸಲ್ಯೂಷನ್ಸ್ ಉಪಾದ್ಯಕ್ಷ ಕಿಶೋರ್ ರಾಮಿ ಸೆಟ್ಟಿ ಡಾ. ಅಶ್ವಥ್ ನಾರಾಯಣ್ ಅವರೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಂವಾದ ನಡೆಸಿದರು.

Related Stories

No stories found.

Advertisement

X
Kannada Prabha
www.kannadaprabha.com