ಪ್ರಚೋದನಾಕಾರಿ ಪೋಸ್ಟ್: ಲೇಖಕ ಆಕಾರ್ ಪಟೇಲ್ ವಿರುದ್ಧ ಎಫ್ ಐಆರ್

ಟ್ವಿಟ್ಚರ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮಾಜಿ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ವಿರುದ್ಧ ಎಫ್ ಆರ್ ದಾಖಲಿಸಲಾಗಿದೆ. 
ಆಕಾರ್ ಪಟೇಲ್
ಆಕಾರ್ ಪಟೇಲ್
Updated on

ಬೆಂಗಳೂರು: ಟ್ವಿಟ್ಚರ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮಾಜಿ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ವಿರುದ್ಧ ಎಫ್ ಆರ್ ದಾಖಲಿಸಲಾಗಿದೆ. 

ಟ್ವಿಟರ್‌ ಮೂಲಕ ಪ್ರತಿಭಟನೆಗೆ ಕರೆ ನೀಡಿದ ಆರೋಪದಡಿ ಲೇಖಕ ಆಕಾರ್ ಪಟೇಲ್ ಅವರ ವಿರುದ್ಧ ಜೆಸಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ಮಾಡುವಂತೆ ಲೇಖಕ ಆಕಾರ್ ಪಟೇಲ್ ಕರೆ ನೀಡಿದ್ದರು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದ್ದಕ್ಕೆ ಜೆಸಿ ನಗರ ಪೊಲೀಸರು ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಡಿಯೋವನ್ನು ಅಲ್ಲಿನ ಮಾಧ್ಯಮವೊಂದು ಟ್ವೀಟ್ ಮಾಡಿದೆ. ಇದನ್ನೂ ರಿಟ್ವೀಟ್ ಮಾಡಿರುವ ಲೇಖಕ ಆಕಾರ್ ಪಟೇಲ್, “ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಮತ್ತು ಮಹಿಳೆಯರಿಂದ ಭಾರತದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಬೇಕಿದೆ. ಇದರಿಂದಾಗಿ ಜಗತ್ತು ನಮ್ಮತ್ತ ಗಮನಿಸುತ್ತದೆ. ಪ್ರತಿಭಟನೆ ಒಂದು ಕರಕುಶಲ” ಎಂದು ಬರೆದುಕೊಂಡಿದ್ದಾರೆ.

ಲೇಖಕ ಆಕಾರ್ ಪಟೇಲ್ ಅವರ ಈ ಹೇಳಿಕೆಗೆ ಕೆಲ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದೆ, ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಕೋವಿಡ್-19 ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ? ಪ್ರತಿಭಟನೆ ಈಗ ಅಗತ್ಯವಿದೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಆಕಾರ್ ಪಟೇಲ್ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದಕ್ಕೆ ಅಮ್ನೆಸ್ಟಿ ಇಂಡಿಯಾ ಕಾರ್ಯಕಾರಿ ನಿರ್ದೇಶಕ ಅವಿನಾಶ್ ಕುಮಾರ್ ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com