ಕೋಮು ಆಧಾರದ ಮೇಲೆ ಸಾಮಾಜಿಕ ಮಾಧ್ಯಮಗಳು ಜನರನ್ನು ವಿಭಜಿಸುತ್ತಿವೆ:ಹೈಕೋರ್ಟ್ ಆತಂಕ

ಸಾಮಾಜಿಕ ಮಾಧ್ಯಮಗಳು ಜನರಲ್ಲಿ ಗೊಂದಲ,ಸಮಸ್ಯೆ ಸೃಷ್ಟಿಮಾಡುವುದಲ್ಲದೆ, ಕೋಮುವಾದಿ ಮಾರ್ಗಗಳ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು:ಸಾಮಾಜಿಕ ಮಾಧ್ಯಮಗಳು ಜನರಲ್ಲಿ ಗೊಂದಲ,ಸಮಸ್ಯೆ ಸೃಷ್ಟಿಮಾಡುವುದಲ್ಲದೆ, ಕೋಮುವಾದಿ ಮಾರ್ಗಗಳ ಮೂಲಕ ಜನರನ್ನು ವಿಭಜಿಸುತ್ತಿವೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ 19 ವರ್ಷದ ರಿಹಾನ್ ಮತ್ತು 20 ವರ್ಷದ ಶಹಬಾಝ್ ಅವರ ಮೇಲಿನ ಆರೋಪಕ್ಕೆ ಅರ್ಜಿ ವಿಚಾರಣೆ ನಡೆಸಿ ಜಾಮೀನು  ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್ ದೇವದಾಸ್ ಈ ಕಳವಳ ವ್ಯಕ್ತಪಡಿಸಿದ್ದಾರೆ.

ನಡೆದ ಘಟನೆಯೇನು?:ಚರಂಡಿಯಿಂದ ಕಲ್ಲಂಗಡಿ ಹಣ್ಣು ಹೆಕ್ಕುವುದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಈ ಇಬ್ಬರು ಯುವಕರ ವಿರುದ್ಧ ಕಳೆದ ಏಪ್ರಿಲ್ 17ರಂದು ಕೇಸು ದಾಖಲಾದ ನಂತರ ಬಸವೇಶ್ವರ ಚೌಕ ಪೊಲೀಸರು ಬಂಧಿಸಿದ್ದರು. ಕಲ್ಲಂಗಡಿಯನ್ನು ಉದ್ದೇಶಪೂರ್ವಕವಾಗಿ ಚರಂಡಿಗೆ ಎಸೆದು ನಂತರ ಅಲ್ಲಿಂದ ತೆಗೆದು ಅದನ್ನು ಮಾರಾಟ ಮಾಡಿ ಜನರಿಗೆ ಕಾಯಿಲೆ ತರುವ ದುರುದ್ದೇಶವಾಗಿದೆ ಎಂದು ಅರ್ಜಿದಾರರು ದೂರಿನಲ್ಲಿ ನಮೂದಿಸಿ ನಂತರ ಕೇಸು ದಾಖಲಾಗಿ ಬಂಧಿತರಾಗಿದ್ದರು.

ವಿಚಾರಣೆ ಸಂದರ್ಭದಲ್ಲಿ ಆರೋಪಗಳ ಸತ್ಯಾಸತ್ಯತೆಯನ್ನು ನಿರ್ಧರಿಸಬೇಕು ಎಂದು ಹೇಳಿದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿದರು. ಐಪಿಸಿ ಸೆಕ್ಷನ್ 328 ಸಾಕಾಗುವುದಿಲ್ಲ, ಇದು ಜಾಮೀನುರಹಿತ ಬಂಧನ ಶಿಕ್ಷೆಯಾಗಿದ್ದು 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಅಕ್ರಮ ವಲಸಿಗರಿಗೆ ಹೈಕೋರ್ಟ್ ಮಾರ್ಗಸೂಚಿ: ಅಕ್ರಮ ವಿದೇಶಿಗರಿಗೆ ಅವರನ್ನು ಗಡೀಪಾರು ಮಾಡುವವರೆಗೆ ಬಂಧನ ಕೇಂದ್ರಗಳಲ್ಲಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ.

ಬಾಬುಲ್ ಖಾನ್ ಮತ್ತು ಇತರ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಜಾಮೀನು ನೀಡಿ ಆದೇಶ ಹೊರಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಮಾರ್ಗಸೂಚಿ ಹೊರಡಿಸಿದರು. ಇವರನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದರು. ಸರ್ಕಾರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವವರೆಗೆ ಅಥವಾ ಕೇಸನ್ನು ನ್ಯಾಯಾಲಯ ನಿರ್ಧರಿಸುವವರೆಗೆ ಅಕ್ರಮವಾಗಿ ಬಂದಿರುವ ವಿದೇಶಿ ವಲಸಿಗರನ್ನು ಬಂಧನ ಕೇಂದ್ರಗಳಲ್ಲಿಡಬೇಕೆಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com