ಲಾಕ್ ಡೌನ್ ಮಧ್ಯೆ ರಕ್ತದೋಕುಳಿ: ಬೆಂಗಳೂರು ನಗರದಲ್ಲಿ ಇಬ್ಬರ ಭೀಕರ ಹತ್ಯೆ!

ಕೊರೋನಾ ಲಾಕ್ ಡೌನ್ ಇದ್ದಂತೆಯೇ ಕ್ಸಿಲಿಕಾನ್ ಸಿಟಿಯಲ್ಲಿ ರಕ್ತದೋಕುಳಿ ಹರಿದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಕೊರೋನಾ ಲಾಕ್ ಡೌನ್ ಇದ್ದಂತೆಯೇ ಕ್ಸಿಲಿಕಾನ್ ಸಿಟಿಯಲ್ಲಿ ರಕ್ತದೋಕುಳಿ ಹರಿದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಯಾಗಿದ್ದಾರೆ.

ನಗರದ ಎಚ್‍ಎಎಲ್ ಸಮೀಪ  ಅರವಿಂದ್ (27)  ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇನ್ನೊಂದೆಡೆ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ ಮುತ್ತೂಟ್ ಫೈನಾನ್ಸ್ ಸೆಕ್ಯೂರಿಟಿ ಗಾರ್ಡ್ ಶಿವಣ್ಣ (65) ಎಂಬಾತನನ್ನು ಸಹ ಅಪರಿಚಿತ ದುಷ್ಕರ್ಮಿಗಳು ಭೀಕರ ಹತ್ಯೆ ಮಾಡಿದ್ದಾರೆ.

ಅರವಿಂದ್ ಅವರನ್ನು ಶನಿವಾರ ರಾತ್ರಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅರವಿಂದ್ ಜೈಲಿನಿಂದ ಬಿಡುಗಡೆಯಾಗಿದ್ದನೆನ್ನಲಾಗಿದ್ದು ಹಳೆ ದ್ವೇಷದ ಕಾರಣ ಈ ಕೃತ್ಯ ನಡೆದಿದೆ, ಎಂದು ತಿಳಿದುಬಂದಿದೆ.ಎಚ್‍ಎಎಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತ ಶಿವಣ್ಣ ಸಹ ಅಪರಿಚಿತ ದುಷ್ಕರ್ಮಿಗಳಿಂದ ಹತರಾಗಿದ್ದು ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com