
ಬೆಂಗಳೂರು: ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ರಾಜ್ಯದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಟ್ಯಾಗ್ ಕೈ ಬಿಡುವಂತೆ ಯುಜಿಸಿ ಜಂಟಿ ಕಾರ್ಯದರ್ಶಿ ಅರ್ಚನಾ ಠಾಕೂರ್ ತಿಳಿಸಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು, ತಮ್ಮ ವೆಬ್ ಸೈಟ್ ನಲ್ಲಿ ಜಾಹೀರಾತು, ವೆಬ್ ಸೈಟ್, ಮತ್ತು ಇ-ಮೇಲ್ ಅಡ್ರೆಸ್ ನಲ್ಲಿ ಇನ್ನೂ ಕೂಡ ಯುನಿವರ್ಸಿಟಿ ಟ್ಯಾಗ್ ಬಳಸುತ್ತಿದ್ದಾರೆ.
ಒಂದು ವೇಳೆ ಯೂನಿವರ್ಸಿಟಿ ಟ್ಯಾಗ್ ಬಳಸುವುದನ್ನು ನಿಲ್ಲಿಸದಿದ್ದರೇ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಕ್ರೈಸ್ಟ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫಾರ್ಮೈಷನ್ ಟೆಕ್ನಾಲಜಿ, ಜವಹರ್ ಲಾಲ್ ನೆಹರು ಸೆಂಟರ್, ಜೈನ್ ವಿವಿ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ
ಸಂಸ್ಥೆ, ಮೈಸೂರಿನ ಜೆಎಸ್ ಎಸ್ ಅಕಾಡೆಮಿ, ಬೆಳಗಾವಿಯ ಕೆಎಲ್ ಇ ಅಕಾಡೆಮಿ, ಮಣಿಪಾಲದ ಮಣಿಪಾಲ್ ಅಕಾಡೆಮಿ, ಕೋಲಾರದ ಶ್ರೀ ದೇವರಾಜ್ ಅರಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಂಗಳೂರಿನ ನಿಟ್ಟೆ ಮತ್ತು ವಿಜಯಪುರದ ಬಿಎಲ್ ಡಿಇ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
Advertisement