ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಆಟೋ, ಟ್ಯಾಕ್ಸಿ ಚಾಲಕರಿಗೆ ಐಟಿ ವೃತ್ತಿಪರರಿಂದ ಸಹಾಯ!

ಕೋವಿಡ್-19ನಿಂದ ಸಂಕಷ್ಟಕ್ಕೊಳಗಾದ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಕಳೆದ ತಿಂಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದಾಗ ಈ ವರ್ಗದವರಿಗೆ ನಿರಾಳ ಭಾವನೆ ಬಂತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19ನಿಂದ ಸಂಕಷ್ಟಕ್ಕೊಳಗಾದ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಕಳೆದ ತಿಂಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದಾಗ ಈ ವರ್ಗದವರಿಗೆ ನಿರಾಳ ಭಾವನೆ ಬಂತು.

ಈ ಸರ್ಕಾರದ ಸೌಲಭ್ಯಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಹಲವರಿಗೆ ಗೊತ್ತಿರಲಿಲ್ಲ. ಇದು ಸಾಫ್ಟ್ ವೇರ್ ಎಂಜಿನಿಯರ್ ಕೌಶರ್ ರಬ್ಬಾನಿ ಮತ್ತು ಅವರ ಇತರ ಐಟಿ ವೃತ್ತಿಪರರು ಒಟ್ಟು ಸೇರಿ 10 ಕಾರ್ಯಕರ್ತರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಹಾಯ ಮಾಡುತ್ತಿದ್ದಾರೆ. ಸೇವಾ ಸಿಂಧು ಪೋರ್ಟಲ್ ನಲ್ಲಿ  ಅರ್ಜಿ ತುಂಬಿಸಲು 10 ಚಾಲಕರಿಗೆ ಸಹಾಯ ಮಾಡಿದ್ದಾರೆ.

ಅರ್ಜಿ ತುಂಬಿ ಕೊಡಬೇಕಾದರೆ 1500 ರೂಪಾಯಿ ಕೊಡಬೇಕು ಎಂದು ಬ್ರೋಕರ್ ಗಳು ಕೇಳಿದ್ದರಂತೆ, ಫಲಾನುಭವಿಗಳು ಆಧಾರ್ ಕಾರ್ಡು. ಚಾಲನಾ ಪರವಾನಗಿ ಪತ್ರ, ವಾಹನದ ವಿವರ, ದಾಖಲಾತಿ ಸಂಖ್ಯೆ ಇತ್ಯಾದಿಗಳನ್ನು ಕೊಡಬೇಕು.ಎಲ್ಲಿಂದ ಪೋರ್ಟಲ್ ನಲ್ಲಿ ಅರ್ಜಿ ಹಾಕಿದ್ದು ಎಂಬ ವಿವರ ಕೂಡ ಕೊಡಬೇಕಾಗಿತ್ತು ಎನ್ನುತ್ತಾರೆ ಕಾರ್ಯಕರ್ತ ಶಾಜಿನ್ ಸಿದ್ದಿಖಿ.

ಡಿಜಿಟಲ್ ಪ್ರಕ್ರಿಯೆಗಳನ್ನು ಸುಲಭವಾಗಿ ಸರಳವಾಗಿ ಫಲಾನುಭವಿಗಳಿಗೆ ಹೇಳಿಕೊಟ್ಟಿದ್ದೇವೆ. ಒಬ್ಬ ಚಾಲಕನು ವಿವರಗಳನ್ನು ಕೇಳಲು ಅಂಚೆ ಕಚೇರಿಗೆ ಹೋದಾಗ ಪೋರ್ಟಲ್ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಕೆಲವು ತಾಂತ್ರಿಕ ಪದಗಳ ಬಗ್ಗೆ ಗೊಂದಲಕ್ಕೊಳಗಾದಾಗ ನಮಗೆ ಕರೆಗಳು ಬಂದವು. ಒಬ್ಬರು ವಾಹನಕ್ಕೆ ಆರೋಗ್ಯ ಪ್ರಮಾಣಪತ್ರ ಏನೆಂದು ಕೇಳಿದರು. ಮಾಲಿನ್ಯ ಪ್ರಮಾಣಪತ್ರದ ಅರ್ಥ ಹೇಗೆ ಎಂದು ನಾವು ವಿವರಿಸಿದೆವು ಎಂದು ರಬ್ಬಾನಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com