ಕೆಆರ್ ಎಸ್ ಬಳಿ ಲಾಕ್ ಡೌನ್ ಉಲ್ಲಂಘಿಸಿ ಬರ್ತ್ ಡೇ ಪಾರ್ಟಿ ನಡೆಸಿದ್ದ 34 ಮಂದಿ ಬಂಧನ

ಕೊವಿಡ್ ಹಿನ್ನಲೆಯಲ್ಲಿ ಲಾಕ್ ಡೌನ್ ಇದ್ದರು ಸಹ ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಆದೇಶ ಉಲ್ಲಂಘಿಸಿ ಶ್ರೀರಂಗಪಟ್ಟಣ ತಾಲ್ಲೊಕು ಕೆ.ಆರ್.ಎಸ್ ಹಿನ್ನೀರು ಬಳಿಯ ಫಾರ್ಮ್ ಹೌಸ್‌ನಲ್ಲಿ ಬುಧವಾರ ರಾತ್ರಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ 34 ಮಂದಿಯನ್ನು ಕೆ ಆರ್‌ಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಬರ್ತ್ ಡೇ ಪಾರ್ಟಿಯಲ್ಲಿ ಮೋಜು ಮಸ್ತಿ
ಬರ್ತ್ ಡೇ ಪಾರ್ಟಿಯಲ್ಲಿ ಮೋಜು ಮಸ್ತಿ
Updated on

ಮಂಡ್ಯ: ಕೊವಿಡ್ ಹಿನ್ನಲೆಯಲ್ಲಿ ಲಾಕ್ ಡೌನ್ ಇದ್ದರು ಸಹ ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಆದೇಶ ಉಲ್ಲಂಘಿಸಿ ಶ್ರೀರಂಗಪಟ್ಟಣ ತಾಲ್ಲೊಕು ಕೆ.ಆರ್.ಎಸ್ ಹಿನ್ನೀರು ಬಳಿಯ ಫಾರ್ಮ್ ಹೌಸ್‌ನಲ್ಲಿ ಬುಧವಾರ ರಾತ್ರಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ 34 ಮಂದಿಯನ್ನು ಕೆ ಆರ್‌ಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  

ಮೈಸೂರು ಮೂಲದ ಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿ ಪಾರ್ಟಿಯಲ್ಲಿ ಪಾಲ್ಲೊಂಡಿದ್ದ ಬಸಪ್ಪ ಎಂಬುವರ ಪುತ್ರ ಭರತ್ ರಾಜ್ ಸೇರಿದಂತೆ 34 ಮಂದಿಯನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಮೈಸೂರು ಮತ್ತು ಬೆಂಗಳೂರು ಮೂಲದ ಶ್ರೀಮಂತ ಕುಟುಂಬದವರೆಂದು ತಿಳಿದು ಬಂದಿದೆ. ಬಂಧಿತರ ವಿರುದ್ದ  103/2020 ಕಲಂ 269,271,290 ಐಪಿಸಿ 92(ಐ) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಕಲಂ 41 ಕ್ಲಾಸ್ ಸಿಆರ್‌ಪಿಸಿ ಅನ್ವಯ ನೊಟೀಸ್ ಜಾರಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ. 

ಘಟನೆ ವಿವರ; ದಾಸಪ್ಪ @ದಾಸ ಎಂಬುವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಕೆಆರ್‌ಎಸ್‌ನ ಹಿನ್ನೀರು ಬಳಿಯಿರುವ ಶೇಖರ್ ಎಂಬುವರಿಗೆ ಸೇರಿದ ಫಾರ್ಮ್ ಹೌಸ್‌ನಲ್ಲಿ ಬುಧವಾರ ರಾತ್ರಿ ೧೦ರ ಸಮಯದಲ್ಲಿ ಶಾಮಿಯಾನ ಹಾಕಿಕೊಂಡು ಡಕ್ ಮತ್ತು ಮ್ಯೂಸಿಕ್ ಸ್ಪಿಕ್ಕರ್‌ಗಳಲ್ಲಿ ಸಾಂಗ್‌ಗಳನ್ನು ಹಾಕಿಕೊಂಡು ಅಲ್ಲದೆ ಆರ್ಕೆಸ್ಚ್ರಾ ಸಹ ಆಯೋಜನೆ ಮಾಡಿ 34 ಮಂದಿ ನೃತ್ಯ ಮಾಡುತ್ತಾ ಸ್ಥಳಿಯರಿಗೆ ಕಿರಿಕಿರಿ ಉಂಟು ಮಾಡುತ್ತಿದರು. ಹಲವು ಕಾರ್‌ಗಳಲ್ಲಿ ಬಂದಿದ್ದ ಇವರು ಗುಂಡು, ತುಂಡಿನ ಪಾರ್ಟಿಯಲ್ಲೂ ತೊಡಗಿದ್ದರು. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ ಅವರಿಗೆ ಉದ್ದಟತನದಿಂದ ಉತ್ತರ ನೀಡಿ ತಮ್ಮ ಮೋಜು, ಮಸ್ತಿನ ಪಾರ್ಟಿಯನ್ನು ಮುಂದುವರೆಸಿದ್ದರು. ಈ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದ ಕೆಆರ್‌ಎಸ್ ಠಾಣೆಯ ಪಿಏಸ್‌ಐ ಎಸ್.ಬಿ.ನವೀನ್ ಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, 5 ಮಂದಿಗಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬ ಸರ್ಕಾರಿ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಪಾರ್ಟಿ ಮಾಡುತ್ತಿದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com