ಕೊರೋನಾ ಆರ್ಥಿಕ ಸಂಕಷ್ಟದಿಂದಾಗಿ ಬೀದಿಗಿಳಿದು ಮಾಸ್ಕ್ ಮಾರುತ್ತಿರುವ ಮಕ್ಕಳು!

ಈ ದೃಶ್ಯ ನೋಡುವಾಗ ನಿಜಕ್ಕೂ ದುಃಖವಾಗುತ್ತದೆ. ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಮೈಸೂರಿನಲ್ಲಿ ಹಲವು ವಾಹನಗಳಲ್ಲಿ ಬಾವುಟ ತೋರಿಸುತ್ತಾ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು.
ಮೈಸೂರಿನ ರಸ್ತೆಯಲ್ಲಿ ಮಾಸ್ಕ್ ಮಾರುತ್ತಿರುವ ಬಾಲಕ
ಮೈಸೂರಿನ ರಸ್ತೆಯಲ್ಲಿ ಮಾಸ್ಕ್ ಮಾರುತ್ತಿರುವ ಬಾಲಕ

ಮೈಸೂರು: ಈ ದೃಶ್ಯ ನೋಡುವಾಗ ನಿಜಕ್ಕೂ ದುಃಖವಾಗುತ್ತದೆ. ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಮೈಸೂರಿನಲ್ಲಿ ಹಲವು ವಾಹನಗಳಲ್ಲಿ ಬಾವುಟ ತೋರಿಸುತ್ತಾ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು.

ಅದರಿಂದ ಕೇವಲ ಕೆಲವು ಮೀಟರ್ ಗಳ ದೂರದಲ್ಲಿ 9ರಿಂದ 10 ವರ್ಷದೊಳಗಿನ ಮಕ್ಕಳು ಬಿಸಿಲಿನಲ್ಲಿ ನಿಂತು ಮಾಸ್ಕ್, ಪೆನ್ ಗಳನ್ನು ಮಾರುತ್ತಿದ್ದರು. ಕೋವಿಡ್-19 ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ ಮೈಸೂರು ನಗರದಲ್ಲಿ ಅನೇಕ ಮಕ್ಕಳು ಮಾಸ್ಕ್ ಗಳನ್ನು ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕೆಲವು ಕುಟುಂಬಗಳಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದ್ದು ಅಂತವರು ಮಕ್ಕಳನ್ನು ಕೆಲಸಕ್ಕೆ ಒತ್ತಾಯಪೂರ್ವಕವಾಗಿ ಕಳುಹಿಸುತ್ತಿದ್ದಾರೆ. ಹತ್ತು ವರ್ಷದ ಬಾಲಕ ಸಮೀರ್(ಹೆಸರು ಬದಲಿಸಲಾಗಿದೆ)ಮೈಸೂರು-ಮನಡವಾಡಿ ಮಾರ್ಗದಲ್ಲಿ ತನ್ನ ಕಿರಿಯ ಸೋದರನ ಜೊತೆಗೆ ಮಾಸ್ಕ್ ಗಳನ್ನು ಮಾರುತ್ತಿದ್ದಾನೆ. ಕಳೆದ 10 ದಿನಗಳಿಂದ 80ರಿಂದ 100 ಮಾಸ್ಕ್ ಗಳನ್ನು ಮಾರಾಟ ಮಾಡುತ್ತೇನೆ ಎನ್ನುತ್ತಾನೆ.

ಮಾಸ್ಕ್ ಗಳ ಬೆಲೆ 20 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಇದೆ. ನನ್ನ ಕುಟುಂಬಕ್ಕೆ ಸಹಾಯವಾಗಲು ನಾನು ಈ ಕೆಲಸ ಮಾಡುತ್ತಿದ್ದೇನೆ. ಎಲ್ಲ ಮಕ್ಕಳಂತೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ಬೇಸರವಾಗುತ್ತಿದೆ ಎಂದಾಗ ಆತನ ಸೋದರ ಮಧ್ಯೆ ಪ್ರವೇಶಿಸಿ, ಹೌದು ನನಗೂ ಇಷ್ಟವಾಗುತ್ತಿಲ್ಲ ಎಂದನು.

ಮತ್ತೊಬ್ಬ 12 ವರ್ಷದ ಬಾಲಕ ಚಂದನ್(ಹೆಸರು ಬದಲಿಸಲಾಗಿದೆ)ನಮ್ಮ ಸಂಬಂಧಿಕರೊಬ್ಬರು ನನ್ನ ತಂದೆ ತಾಯಿಗೆ ನನ್ನನ್ನು ಕೆಲಸಕ್ಕೆ ಹಚ್ಚುವಂತೆ ಹೇಳಿದರು ಎನ್ನುತ್ತಾನೆ. ಅವರು ದಿನಕ್ಕೆ 200ರಿಂದ 300 ರೂಪಾಯಿ ಕೊಡುತ್ತಾರಂತೆ.

ಕೆಲವರು ಬಾಲ ಕಾರ್ಮಿಕ ಕಾನೂನುಗಳಲ್ಲಿನ ಲೋಪದೋಷಗಳನ್ನು ಬಳಸಿಕೊಳ್ಳುತ್ತಾರೆ, ಪ್ರಸ್ತುತ ಬಿಕ್ಕಟ್ಟು ಮತ್ತು ಪೋಷಕರು ಉದ್ಯೋಗ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹಣವನ್ನು ಸಂಪಾದಿಸುವ ಸಾಧನವಾಗಿ ತಮ್ಮ ಮಕ್ಕಳನ್ನು ಬಳಸಿಕೊಳ್ಳುತ್ತಾರೆ ಎಂದು ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com