ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಡ್ಯಕ್ಕೆ ನೆರವಾದ ಹೈಡ್ರಾಕ್ಸಿಕ್ಲೋರೋಕ್ವಿನ್: ಅಧಿಕಾರಿಗಳು

ಕಳೆದ ತಿಂಗಳವರೆಗೆ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.ಆದರೆ, ಇದೀಗ ಹಾಟ್ ಸ್ಪಾಟ್ ಗಳಿಂದ ನಿರಂತರವಾಗಿ ಜನರು ಬರುತ್ತಿದ್ದರೂ ಕೊರೋನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ
ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ
Updated on

ಬೆಂಗಳೂರು: ಕಳೆದ ತಿಂಗಳವರೆಗೆ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.ಆದರೆ, ಇದೀಗ ಹಾಟ್ ಸ್ಪಾಟ್ ಗಳಿಂದ ನಿರಂತರವಾಗಿ ಜನರು ಬರುತ್ತಿದ್ದರೂ ಕೊರೋನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಿಂದ ಹಿಂತಿರುಗಿದವರು ಸೇರಿದಂತೆ ಕ್ವಾರಂಟೈನ್ ನಲ್ಲಿರುವ ಎಲ್ಲರಿಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಲು ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಉಲ್ಲೇಖಿಸುತ್ತಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ವಯಸ್ಸಾದವರಲ್ಲಿ ಅಡ್ಡ ಪರಿಣಾಮದ ಆತಂಕದ ಬಗ್ಗೆ ವೈದ್ಯರಲ್ಲಿನ ಮಿಶ್ರ ಅಭಿಪ್ರಾಯದ ನಡುವೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣವನ್ನು ಕಡಿಮೆ ಮಾಡಿದೆ. ಇದರಲ್ಲಿ ಯಶಸ್ವಿಯಾಗಿರುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಬಳಕೆಯಿಂದ ಅಡ್ಡ ಪರಿಣಾಮವಾದ ಬಗ್ಗೆ ಯಾವುದೇ ರೋಗಿಯೂ ಹೇಳಿಕೆ ನೀಡಿಲ್ಲ. ತಬ್ಲೀಘಿ ಜಮಾತ್ ಸದಸ್ಯರು ದೆಹಲಿಯಿಂದ ವಾಪಸ್ಸಾದ ನಂತರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಮಹಾರಾಷ್ಟ್ರದಿಂದ ಹಿಂತಿರುಗಿದ ಬಹುತೇಕ ಮಂದಿಯಲ್ಲಿ ಪಾಸಿಟಿವ್ ಕಂಡುಬರುವ ಮೂಲಕ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆ ಆಗಿತ್ತು. ಆದಾಗ್ಯೂ, ಜೂನ್ ಮೊದಲ ವಾರದಲ್ಲಿ ಮುಂಬೈಯಿಂದ ಬಂದಂತವರಲ್ಲಿ ಸೋಂಕು ಮುಂದುವರೆದರೂ
ಸಕ್ರಿಯ ಪ್ರಕರಣಗಳ ಸಂಖ್ಯೆ 39ಕ್ಕೆ ಇಳಿದಿತ್ತು.

ಮುಂಬೈಯಿಂದ ಹಿಂದಿರುಗಿ ಕ್ವಾರಂಟೈನ್ ನಲ್ಲಿದ್ದವರಿಗೆ ಮೊದಲ ದಿನ ಉತ್ತಮ ಊಟದ ಜೊತೆಗೆ ಎರಡು ಬಾರಿ 400 ಎಂಜಿ ಹೈಡ್ರಾಕ್ಸಿಕ್ಲೋರೋಕ್ವಿನ್  ಔಷಧ ನೀಡಲಾಗುತಿತ್ತು.ಹತ್ತನೇ ದಿನ ನಡೆಸಲಾಗುವ ಮೊದಲ ಪರೀಕ್ಷೆ ಮುಂಚಿನಿಂದಲೂ ಹತ್ತಿರದಿಂದ ನಿರ್ವಹಣೆ ಮಾಡಲಾಗುತಿತ್ತು ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್  ಸುತ್ತ ಚರ್ಚೆ ನಡೆಯುತ್ತಿದ್ದರೂ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ, ಪಾಸಿಟಿವ್ ಹೊಂದಿದವರಲ್ಲಿಯೂ ಅಲ್ಪ ಪ್ರಮಾಣದ ಲಕ್ಷಣಗಳಿವೆ. ಯಾರಿಂದಲೂ ಅಡ್ಡ ಪರಿಣಾಮದ ಬಗ್ಗೆ ದೂರುಗಳು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯಲ್ಲಿ ದೊಡ್ಡ ವಿವಾದವೇನಿಲ್ಲ, ಮುಂಜಾಗ್ರತಾ ಕ್ರಮವಾಗಿಆರೋಗ್ಯ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಏಳು ವಾರಗಳ ಕಾಲ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ರಾಜ್ಯದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com